ದೆಹಲಿ ಹಿಂಸಾಚಾರ : ಕೂರತ್ ತಂಙಳ್ ಖಂಡನೆ

Update: 2020-02-28 17:26 GMT

 ಮಂಗಳೂರು, ಫೆ.28: ದೆಹಲಿಯಲ್ಲಿ ಕಳೆದ ಐದಾರು ದಿನಗಳಿಂದ ನಡೆಯುತ್ತಿರುವ ಅಮಾಯಕರ ಮೇಲಿನ ದೌರ್ಜನ್ಯ, ಕೊಲೆ, ಮಸೀದಿ, ಮನೆ, ವ್ಯಾಪಾರ ಕೇಂದ್ರಗಳ ಮೇಲೆ ದಾಳಿ ಹಾಗೂ ದೆಹಲಿಯನ್ನು ಬೆಂಕಿಗಾಹುತಿಗೊಳಿಸಿ ಯುದ್ಧ ಭೂಮಿಯನ್ನಾಗಿ ಪರಿವರ್ತಿಸುತ್ತಿರುವ ಸಮಾಜ ಘಾತುಕ ಕೃತ್ಯವನ್ನು ಉಳ್ಳಾಲ ಖಾಝಿ ಅಸೈಯ್ಯದ್ ಫಝಲ್ ಕೋಯಮ್ಮ ಕೂರತ್ ತಂಙಳ್ ಅಲ್‌ಬುಖಾರಿ ಖಂಡಿಸಿದ್ದಾರೆ.

ಕೋಮುವಾದಿ ಫ್ಯಾಸಿಸ್ಟ್ ಶಕ್ತಿಗಳನ್ನು ಹದ್ದು ಬಸ್ತಿನಲ್ಲಿಡಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿರುವ ಕೂರತ್ ತಂಙಳ್, ಹಿಂಸಾಚಾರವನ್ನು ಹತ್ತಿಕ್ಕಬೇಕಾದವರ ನಿಷ್ಕ್ರಿಯತೆ, ಸಾರ್ವಜನಿಕ ಸೇವೆಯಲ್ಲಿ ಗುರುತಿಸಬೇಕಾದವರು ಹಿಂಸೆಗೆ ಆಹ್ವಾನ ನೀಡುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News