ಅಂತಾರಾಷ್ಟ್ರೀಯ ಕಿಕ್ ಬಾಕ್ಸಿಂಗ್: ಅನೀಶ್ ಶೆಟ್ಟಿ ಚಾಂಪಿಯನ್

Update: 2020-02-29 12:28 GMT

 ಉಡುಪಿ, ಫೆ.29: ಥಾಯ್ಲಂಡ್‌ನಲ್ಲಿ ಇತ್ತೀಚೆಗೆ ಜರಗಿದ ಅಂತಾರಾಷ್ಟ್ರೀಯ ಮಟ್ಟದ ಮೂವಾಯ್ ಥಾಯ್ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ 65 ಕೆ.ಜಿ. ವಿಭಾಗದಲ್ಲಿ ಕುಂದಾಪುರದ ಅನೀಶ್ ಶೆಟ್ಟಿ ಕಟ್ಕೇರೆ ನಾಲ್ಕು ಬಾರಿ ಚಾಂಪಿಯನ್ ಥಾಯ್ಲೆಂಡ್‌ನ ನ್ಯುವ್ಲಿಕಿಟ್ ಅವರನ್ನು ಏಕೈಕ ಸುತ್ತಿನಲ್ಲಿ ಹೊಡೆದುರುಳಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ.

ಕುಂದಾಪುರ ತಾಲೂಕಿನ ಕೋಟೇಶ್ವರ ಕಟ್ಕೇರೆಯ ದಿ.ಶಂಕರ್ ಶೆಟ್ಟಿ ಹಾಗೂ ಉಷಾ ಶೆಟ್ಟಿ ದಂಪತಿಯ ಪುತ್ರರಾಗಿರುವ ಇವರು ಆಳ್ವಾಸ್ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿದ್ದಾರೆ. ಸದ್ಯ ಸಾಫ್ಟ್‌ವೇರ್ ಇಂಜಿನಿಯರ್ ಪದವೀಧರ ನಾಗಿರುವ ಅನೀಶ್ ಶೆಟ್ಟಿ, ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿ ಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News