ಮಾ.2ರಿಂದ ‘ಉದ್ದಿಮೆಶೀಲತೆ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ

Update: 2020-02-29 12:31 GMT

ಉಡುಪಿ, ಫೆ.29: ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗ ಮತ್ತು ವಾಣಿಜ್ಯ ಶಾಸ್ತ್ರ ವಿಭಾಗದ ಜಂಟಿ ಆಶ್ರಯದಲ್ಲಿ ಸೀಡಾಕ್ ಮತ್ತು ಪ್ರಣವ್ ಚಾರಿಟೇಬಲ್ ಟ್ರಸ್ಟ್‌ನ ಸಹಕಾರದೊಂದಿಗೆ ‘ಉದ್ದಿಮೆ ಶೀಲತೆ- ಆರಂಭಿಕ ಯತ್ನಗಳು’ ಎಂಬ ವಿಷಯದ ಕುರಿತ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಮಾ.2 ಮತ್ತು 3ರಂದು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಮಾ.2ರಂದು ಬೆಳಗ್ಗೆ 9:30ಕ್ಕೆ ವಿಚಾರ ಸಂಕಿರಣವನ್ನು ಮಂಗಳೂರು ವಿವಿಯ ವಾಣಿಜ್ಯಶಾಸ್ತ್ರ ಡೀನ್ ಡಾ.ತಿ.ನಂ.ಶ್ರೀಧರ್ ಉದ್ಘಾಟಿಸಲಿರುವರು. ಫ್ಲೆಕ್ಸಿಟ್ರಾನ್ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ನಿರ್ದೇಶಕ ಆರ್.ಎಸ್. ಹಿರೇಮಠ್ ಶಿಖರೋಪ ನ್ಯಾಸವನ್ನು ನೀಡಲಿರುವರು. ಅಧ್ಯಕ್ಷತೆಯನ್ನು ಶಾಸಕ ಲಾಲಾಜಿ ಆರ್.ಮೆಂಡನ್ ವಹಿಸಲಿರುವರು ಎಂದು ಕಾಲೇಜಿನ ಪ್ರಾಂಶು ಪಾಲ ಡಾ.ಅನಿಲ್ ಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಮಾ.3ರಂದು ಜಿಲ್ಲಾ ಕೈಗಾರಿಕಾ ನಿರ್ದೇಶಕ ಸೀತಾರಾಮ ಶೆಟ್ಟಿ ಕೈಗಾರಿಕಾ ಕ್ಷೇತ್ರದ ಯಶಸ್ಸಿನ ಕುರಿತು ಉಪನ್ಯಾಸ ನೀಡಲಿ ರುವರು. ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಅಪ್ಪಾಜಿ ಗೌಡ ವಿಚಾರ ಸಂಕಿರಣ ಗಳ ಪ್ರಸ್ತುತತೆಯ ಕುರಿತು ಮಾತನಾಡಲಿದ್ದಾರೆ. ಸ್ವಂತ ಉದ್ದಿಮೆಯ ಸಾಧ್ಯತೆ, ಸಾಧಕಬಾಧಕಗಳು ಮತ್ತು ಬದ್ಧತೆಯ ಕುರಿತು ಚರ್ಚೆ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಲತಾ ನಾರಾಯಣ ಹೆಗ್ಡೆ, ಉಪನ್ಯಾಸಕ ಲೋಕೇಶ್ ಬಿ., ವಿದ್ಯಾರ್ಥಿಗಳಾದ ಪ್ರಸಾದ್, ಹನುಮಂತ, ರೋಹಿತ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News