130 ಕೋಟಿ ಭಾರತೀಯರ ಹಿತಾಸಕ್ತಿಯ ರಕ್ಷಣೆ ನಮ್ಮ ಉದ್ದೇಶ: ಪ್ರಧಾನಿ ಮೋದಿ

Update: 2020-02-29 13:26 GMT

ಲಕ್ನೊ, ಫೆ.29: ಎಲ್ಲರಿಗೂ ನ್ಯಾಯ ಒದಗಿಸುವುದು ಸರಕಾರದ ಜವಾಬ್ದಾರಿಯಾಗಿದೆ. 'ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ 'ನ ಮೂಲ ಉದ್ದೇಶವೂ ಇದೇ ಆಗಿದೆ. ಈ ಚಿಂತನೆಯೊಂದಿಗೆ ತಮ್ಮ ಸರಕಾರ ಸಮಾಜದ ಪ್ರತಿಯೊಬ್ಬರ ಬದುಕನ್ನು ಉತ್ತಮಗೊಳಿಸಲು ಕಾರ್ಯ ನಿರ್ವಹಿಸುತ್ತಿದೆ. 130 ಕೋಟಿ ಭಾರತೀಯರ ಹಿತಾಸಕ್ತಿಯ ರಕ್ಷಣೆ ತಮ್ಮ ಸರಕಾರದ ಮುಖ್ಯ ಉದ್ದೇಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಹಿರಿಯ ನಾಗರಿಕರಿಗೆ ಸಹಾಯಕ ಸಾಧನಗಳನ್ನು ವಿತರಿಸಿದ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಈ ಹಿಂದಿನ ಸರಕಾರದ ಅವಧಿಯಲ್ಲಿ ಈ ರೀತಿಯ ಸವಲತ್ತು ವಿತರಣಾ ಕಾರ್ಯಕ್ರಮ, ರ್ಯಾಲಿಗಳು ಅಪರೂಪವಾಗಿತ್ತು. ಕಳೆದ 5 ವರ್ಷದಲ್ಲಿ ತಮ್ಮ ಸರಕಾರ ದೇಶದ ವಿವಿಧೆಡೆ ಇಂತಹ 9,000 ಶಿಬಿರಗಳನ್ನು ಆಯೋಜಿಸಿದೆ ಎಂದರು.

ಪ್ರಯಾಗ್‌ರಾಜ್‌ನಲ್ಲಿ ಆಯೋಜಿಸಿರುವ ಶಿಬಿರದಲ್ಲಿ ಹಿರಿಯ ನಾಗರಿಕರಿಗೆ ಹಾಗೂ ಅಂಗವೈಕಲ್ಯ ಹೊಂದಿರುವವರಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಗಿದೆ. ಇವರ ಜೀವನಮಟ್ಟ ಉತ್ತಮಗೊಳಿಸಲು ಸರಕಾರ ಕೈಗೊಂಡಿರುವ ಹಲವು ಯೋಜನೆಗಳಲ್ಲಿ ಇದೂ ಒಂದಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಉತ್ತರಪ್ರದೇಶದ 2 ಕೋಟಿಗೂ ಹೆಚ್ಚಿನ ರೈತ ಕುಟುಂಬದ ಬ್ಯಾಂಕ್ ಖಾತೆಯಲ್ಲಿ ಸುಮಾರು 12,000 ಕೋಟಿ ರೂ. ಮೊತ್ತವನ್ನು ಸರಕಾರ ಜಮೆ ಮಾಡಿದೆ. ಪ್ರಧಾನಮಂತ್ರಿ ಕಿಸಾನ್ ಯೋಜನೆಗೆ 1 ವರ್ಷ ತುಂಬುವ ಹಿನ್ನೆಲೆಯಲ್ಲಿ ದೇಶದಾದ್ಯಂತ 10,000 ರೈತರ ಉತ್ಪಾದಕ ಸಂಘವನ್ನು ಆರಂಭಿಸಲಾಗುವುದು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News