ಪರಮಬೀರ್ ಸಿಂಗ್ ಮುಂಬೈನ ನೂತನ ಪೊಲೀಸ್ ಆಯುಕ್ತ
Update: 2020-02-29 19:53 IST
ಮುಂಬೈ, ಫೆ.29: ಮುಂಬೈನ ಪೊಲೀಸ್ ಆಯಕ್ತ ಸಂಜಯ ಬರ್ವೆ ಅವರು ಶನಿವಾರ ನಿವೃತ್ತರಾಗಿದ್ದು,ಅವರ ಸ್ಥಾನಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಪರಮಬೀರ್ ಸಿಂಗ್ ಅವರನ್ನು ನೇಮಕಗೊಳಿಸಲಾಗಿದೆ ಎಂದು ಮಹಾರಾಷ್ಟ್ರ ಸರಕಾರವು ಪ್ರಕಟಿಸಿದೆ.
ತನ್ನ ನೇಮಕಾತಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್,ಬೀದಿ ಅಪರಾಧಗಳಿಗೆ ತಡೆ,ಮಹಿಳೆಯರ ಸುರಕ್ಷತೆ ಮತ್ತು ಭೂಗತಲೋಕದ ಚಟುವಟಿಕೆಗಳಿಗೆ ಕಡಿವಾಣ ತನ್ನ ಆದ್ಯತೆಗಳಾಗಲಿವೆ ಎಂದು ತಿಳಿಸಿದರು.
1988ರ ಐಪಿಎಸ್ ತಂಡದ ಅಧಿಕಾರಿಯಾಗಿರುವ ಸಿಂಗ್ ಹಾಲಿ ಮಹಾರಾಷ್ಟ್ರ ಭ್ರಷ್ಟಾಚಾರ ನಿಗ್ರಹ ಘಟಕ (ಎಸಿಬಿ)ದ ಮಹಾ ನಿರ್ದೇಶಕರಾಗಿದ್ದರು.
ಡಿಸೆಂಬರ್ 2019ರಲ್ಲಿ ಸಿಂಗ್ ನೇತೃತ್ವದ ಎಸಿಬಿಯು ಎನ್‌ಸಿಪಿ ನಾಯಕ ಅಜಿತ ಪವಾರ್ ಅವರನ್ನು ಭ್ರಷ್ಟಾಚಾರ ಹಗರಣದಿಂದ ಮುಕ್ತಗೊಳಿಸಿದ್ದು,ಪವಾರ್ ಈಗ ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದಾರೆ.