×
Ad

ಯತ್ನಾಳ್ ವಿರುದ್ಧ ಶಿಸ್ತುಕ್ರಮದ ವಿಚಾರ ತಿಳಿದಿಲ್ಲ: ಶೋಭಾ

Update: 2020-02-29 20:31 IST

ಉಡುಪಿ, ಫೆ.29: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಗೆ ಅವರದೇ ತತ್ವ, ಆದರ್ಶ, ವಾದಗಳಿವೆ. ಅವರ ಚಿಂತನೆಯ ಬಗ್ಗೆ ನಮ್ಮಲ್ಲಿ ಚರ್ಚೆ ಇಲ್ಲ. ಅವರ ಕುರಿತು ನಮಗೆ ಬಹಳ ಗೌರವ ಹಾಗೂ ಹೆಮ್ಮೆಯೂ ಇದೆ. ಇದು ಬಿಜೆಪಿ ಪಕ್ಷದ ಅಭಿಪ್ರಾಯ. ಆದರೆ ಯತ್ನಾಳ್ ಬಗ್ಗೆ ಶಿಸ್ತುಕ್ರಮ ಕೈಗೊಳ್ಳುವ ವಿಚಾರ ನನಗೆ ತಿಳಿದಿಲ್ಲ. ಈ ಕುರಿತು ಪಕ್ಷದಲ್ಲಿ ಏನು ತೀರ್ಮಾನ ಆಗಿದೆ ಎಂಬುದು ಗೊತ್ತಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿ ದರು. ಯಡಿಯೂರಪ್ಪಹುಟ್ಟುಹಬ್ಬದಲ್ಲಿ ಸಿದ್ದರಾಮಯ್ಯ ಪಾಲ್ಗೊಂಡ ಬಗ್ಗೆ ಕಾಂಗ್ರೆಸ್ ನಾಯಕರ ಒಳಗೆ ವ್ಯಕ್ತವಾಗಿರುವ ಅಸಮಾಧಾನ ವಿಚಾರದ ಕುರಿತು ಮಾತನಾಡಿದ ಅವರು, ಯಡಿಯೂರಪ್ಪಹುಟ್ಟುಹಬ್ಬ ಪಕ್ಷಾತೀತ ಕಾರ್ಯ ಕ್ರಮ. ಇದರಲ್ಲಿ ಪಕ್ಷದ ಚಿಹ್ನೆ ಇರಲಿಲ್ಲ. ಯಡಿಯೂರಪ್ಪಇಡೀ ರಾಜ್ಯದ ಮುಖ್ಯ ಮಂತ್ರಿ. ಅವರ ಕಾರ್ಯಕ್ರಮದಲ್ಲಿ ಯಾರು ಕೂಡ ಭಾಗವಹಿಸ ಬಹುದು. ಕಾಂಗ್ರೆಸ್ಸಿಗರು ಇದನ್ನು ವಿಶಾಲವಾಗಿ ತೆಗೆದು ಕೊಳ್ಳಬೇಕು. ಕುಮಾರಸ್ವಾಮಿ ಭಾಗಿಯಾಗಿದ್ದರೆ ಇದರಲ್ಲಿ ಯಾವ ಗೊಂದಲವೂ ಇರುತ್ತಿರಲಿಲ್ಲ ಎಂದರು.

ಕರಾವಳಿಯ ಜನತೆಯ ಬಹುಕಾಲದ ಬೇಡಿಕೆಯಾಗಿರುವ ಬೆಂಗಳೂರು ವಾಸ್ಕೋ ಹೊಸ ರೈಲು ಆರಂಭವಾಗಿದೆ. ಇದರಿಂದ ಖಾಸಗಿ ಬಸ್‌ಗಳ ದುಬಾರಿ ದರಕ್ಕೆ ಕಡಿವಾಣ ಬೀಳಲಿದೆ. ಬೆಂಗಳೂರಿನಲ್ಲಿರುವ ಕರಾವಳಿಗರಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News