×
Ad

ಮಂಗಳೂರು: ‘ಬಿಸಿಸಿಐ ಸ್ಮರಣ ಸಂಚಿಕೆ 2020’ ಬಿಡುಗಡೆ

Update: 2020-02-29 20:57 IST

ಮಂಗಳೂರು, ಫೆ. 29: ಬ್ಯಾರೀಸ್ ಚೇಂಬರ್ಸ್‌ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಬಿಸಿಸಿಐ)ಯ ‘ಬಿಸಿಸಿಐ ಸ್ಮರಣ ಸಂಚಿಕೆ 2020’ ಬಿಡುಗಡೆ ಕಾರ್ಯಕ್ರಮವು ಶನಿವಾರ ನಗರ ಓಶಿಯನ್ ಪರ್ಲ್ ಹೊಟೇಲಿನಲ್ಲಿ ಜರುಗಿತು.

ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು. ಬಿಸಿಸಿಐ ಅಧ್ಯಕ್ಷ ಹಾಜಿ ಎಸ್.ಎಂ. ರಶೀದ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಯು.ಟಿ.ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಬಿಸಿಸಿಐ ಪದಾಧಿಕಾರಿಗಳಾದ ಬಿಎಂ ಮುಮ್ತಾಝ್ ಅಲಿ, ಮನ್ಸೂರ್ ಅಹ್ಮದ್ ಆಝಾದ್, ಶೌಕತ್ ಶೌರಿ, ಹಾರಿಸ್ ಮುಕ್ಕ, ಅಸ್ಗರ್ ಡೆಕ್ಕನ್, ನಾಸಿರ್ ಲಕ್ಕಿಸ್ಟಾರ್, ಆಸಿಫ್ ಸೂಫಿಖಾನ್, ನಿಸಾರ್ ಕೋಸ್ಟಲ್, ಇಮ್ತಿಯಾಝ್, ರಝಾಕ್ ಗೋಳ್ತಮಜಲು, ನಝೀರ್ ಕೃಷ್ಣಾಪುರ, ಚಿಕ್ಕಮಗಳೂರು ಘಟಕದ ಅಧ್ಯಕ್ಷ ಸತ್ತಾರ್, ಸಕಲೇಶಪುರ ಘಟಕದ ಅಧ್ಯಕ್ಷ ಝಾಕಿರ್, ಅಬ್ಬುಹಾಜಿ, ಅಕ್ರಂ ಮೂಡಿಗೆರೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News