ದೆಹಲಿ ಹಿಂಸಾಚಾರ: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಖಂಡನೆ
Update: 2020-02-29 21:22 IST
ಮಂಗಳೂರು, ಫೆ.29: ದೆಹಲಿಯಲ್ಲಿ ಅಮಾಯಕರ ವಿರುದ್ದ ವ್ಯವಸ್ಥಿತವಾಗಿ ನಡೆಸುತ್ತಿರುವ ಹಿಂಸಾತ್ಮಕ ದಾಳಿಯನ್ನು ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ತೀವ್ರವಾಗಿ ಖಂಡಿಸಿದೆ.
ಪ್ರಧಾನ ಕಾರ್ಯದರ್ಶಿ ಕೆ. ಅಬ್ದುಲ್ ರಹ್ಮಾನ್ ಹೇಳಿಕೆ ನೀಡಿ ‘ದೆಹಲಿ ಸಹಿತ ರಾಷ್ಟ್ರದ ವಿವಿಧೆಡೆ ಪ್ರಜಾಪ್ರಭುತ್ವ ಪ್ರೇಮಿಗಳು ಕೋಮುವಾದಿಗಳ ಪ್ರಚೋದನಕಾರಿ ಮಾತಿನಿಂದ ಪ್ರೇರಿತರಾಗಿ ಕಾನೂನನ್ನು ಕೈಗೆತ್ತಿಕೊಳ್ಳದೆ ಶಾಂತಿಯನ್ನು ಕಾಪಾಡಬೇಕು’ ಎಂದು ಆಗ್ರಹಿಸಿದೆ.