×
Ad

ಮಾ.8: ‘ಜಪ್ಪಿನಮೊಗರು ಚಲೋ’ ಕಾರ್ಯಕ್ರಮದ ಪೂರ್ವಭಾವಿ ಸಭೆ

Update: 2020-02-29 21:26 IST

ಮಂಗಳೂರು, ಫೆ.29: ದ.ಕ.ಜಿಲ್ಲಾ ಪೌರ ಸಮನ್ವಯ ಸಮಿತಿಯ ವತಿಯಿಂದ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧ ಮಾ.8ರಂದು ನಡೆಯುವ ‘ಜಪ್ಪಿನಮೊಗರು ಚಲೊ’ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಶುಕ್ರವಾರ ನಗರದ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಜರಗಿತು.

ಹಾಜಿ ಯು.ಕೆ.ಯೂಸುಫ್ ಅಧ್ಯಕ್ಷತೆ ವಹಿಸಿದ್ದರು. ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಮುಮ್ತಾಝ್ ಅಲಿ, ಹಿದಾಯ ಫೌಂಡೇಶನ್‌ನ ಅಧ್ಯಕ್ಷ ಮನ್ಸೂರ್ ಅಹ್ಮದ್ ಆಝಾದ್, ಸ್ಥಾಪಕಾಧ್ಯಕ್ಷ ಕಾಸಿಮ್, ಡಾ.ಯು.ಟಿ. ಇಪ್ತಿಕಾರ್ ಅಲಿ, ಸವಿತಿಯ ಮುಖಂಡರಾದ ಯು.ಎಚ್.ಫಾರೂಕ್, ನಝೀರ್ ಉಳ್ಳಾಲ್, ನಝೀರ್ ಕೋಡಿ, ಪ್ರಚಾರ ಸಮಿತಿಯ ಅಧ್ಯಕ್ಷ ಅಶ್ರಫ್ ಬಾವ ಕೋಡಿ ಮತ್ತು ನವಾಝ್ ಉಳ್ಳಾಲ್, ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಮುಖಂಡ ಕೆ.ಎಂ. ಶರೀಫ್, ಎಸ್ಸೆಸ್ಸೆಫ್ ಮುಖಂಡರಾದ ಖುಬೈಬ್ ತಂಙಳ್, ನಾಝಿಮ್ ಉಳ್ಳಾಲ್, ಎಸ್ಕೆಎಸ್ಸೆಸ್ಸೆಫ್ ಸಂಘಟಕ ಬಶೀರ್ ಉಳ್ಳಾಲ್, ಮಾದ್ಯಮ ಸಮಿತಿಯ ಉಸ್ತುವಾರಿ ಅಕ್ರಮ್ ಹಸನ್, ಉದ್ಯಮಿ ಇಮ್ತಿಯಾಝ್, ಮಾಜಿ ಮೇಯರ್ ಕೆ. ಅಶ್ರಫ್, ಪಿಎಫ್‌ಐ ಮುಖಂಡ ಸಿದ್ದೀಕ್ ಕುಂಪಲ, ಯುನಿವೆಫ್ ಅಧ್ಯಕ್ಷ ರಫೀಯುದ್ದೀನ್ ಕುದ್ರೋಳಿ, ಹಮೀದ್ ಉಳ್ಳಾಲ್, ನಝೀರ್ ಬಜಾಲ್, ಸಿದ್ದೀಕ್ ತಲಪಾಡಿ, ಕಾರ್ಪೊರೇಟರ್ ಶಂಸುದ್ದಿನ್ ಕುದ್ರೋಳಿ, ಡಿವೈಎಫ್‌ಐ ಮುಖಂಡ ಅಶ್ರಫ್, ಸ್ವಯಂಸೇವಕರ ಸಮಿತಿಯ ಪ್ರಮುಖರಾದ ಜಲೀಲ್ ಕೃಷ್ಣಾಪುರ ಮತ್ತು ಕೌನ್ಸಿಲರ್ ಖಲೀಲ್ ಮುಕ್ಕಚ್ಚೆರಿ, ಪೌರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಹಳೆಕೋಟೆ, ಕೌನ್ಸಿಲರ್‌ಗಳಾದ ಜಬ್ಬಾರ್, ರಮೀಝ್, ಅಝೀಝ್, ಇಸ್ಮಾಯಿಲ್ ಅಳೇಕಲ, ಅಸ್ಕರ್ ಅಲಿ, ಸಲಫಿ ಸಂಘಟನೆಯ ಪ್ರಮುಖ ಬಾಷಾ, ಇಮ್ತಿಯಾಝ್ ಕಲ್ಲಡ್ಕ, ಯುಕೆಎಫ್ ಲತೀಫ್, ಕೊಟೆಪುರ ಮಸೀದಿಯ ಅಧ್ಯಕ್ಷ ಅಬ್ಬಾಸ್ ಮತ್ತಿರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News