ವ್ಯಕ್ತಿ ನಾಪತ್ತೆ
Update: 2020-02-29 21:30 IST
ಮಂಗಳೂರು, ಫೆ. 29: ನಗರದಲ್ಲಿ ಎ-1 ಸೆಲ್ಯೂಶನ್ಸ್ ಎಂಬ ಸಂಸ್ಥೆಯನ್ನು ನಡೆಸಿಕೊಂಡಿದ್ದ ಸುನೀಲ್ ಡೆಮೆಲ್ಲೊ (40) ಎಂಬವರು ಕಾಣೆಯಾದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾನಸಿಕವಾಗಿ ಖಿನ್ನತೆಗೊಳಗಾಗಿರುವ ಇವರು ಫೆ.25ರಂದು ಪೂ.11ಕ್ಕೆ ವ್ಯವಹಾರದ ನಿಮಿತ್ತ ಭಟ್ಕಳ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಮನೆಗೆ ಬಾರದೆ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
6.2 ಅಡಿ ಎತ್ತರದ, ಧೃಡ ಶರೀರದ, ದುಂಡು ಮುಖ ಮತ್ತು ಬಿಳಿ ಮೈ ಬಣ್ಣ ಹೊಂದಿರುವ ಕೆಂಪು ಬಣ್ಣದ ಟೀ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುವ ಇವರು ಕನ್ನಡ, ತುಳು, ಹಿಂದಿ, ಕೊಂಕಣಿ, ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ.
ಇವರನ್ನು ಕಂಡವರು ಕಂಕನಾಡಿ ನಗರ ಠಾಣೆ ಅಥವಾ ಕಂಟ್ರೋಲ್ ರೂಮ್ (ದೂ.ಸಂ: 0824-2220529, 9480805354, 0824-2220800)ನ್ನು ಸಂಪರ್ಕಿಸಬಹುದು ಎಂದು ಮಂಗಳೂರು ಪೊಲೀಸ್ ಪ್ರಕಟನೆ ತಿಳಿಸಿದೆ.