×
Ad

​ಅಕ್ರಮ ಚಿನ್ನ ಸಾಗಾಟ: ಇಬ್ಬರು ಸೆರೆ

Update: 2020-02-29 21:57 IST

ಮಂಗಳೂರು, ಫೆ.29: ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಸಿಸಿಬಿ ಮತ್ತು ಬರ್ಕೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ಧಿಕ್ ಸ್ಟ್ರೀಟ್ ನಿವಾಸಿ ಮುಹಮ್ಮದ್ ಶಬೀರ್ ಸಿದ್ಧಿ ಅಮೇದಾ (48) ಮತ್ತು ಹಲ್ವಾ ಸ್ಟ್ರೀಟ್ ನಿವಾಸಿ ಅಬ್ದುಲ್ ಹಮೀದ್ ದಾಮ್ಡಾ ಅಬು (47) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 110 ಗ್ರಾಂ ಚಿನ್ನ, 5 ಮೊಬೈಲ್ ಸಹಿತ 5.5 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಚಿನ್ನವನ್ನು ಕಾಯಿನ್, ಉಂಗುರ ಮಾದರಿಯಲ್ಲಿ ಬ್ಯಾಗ್‌ನಲ್ಲಿಟ್ಟು ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಆರೋಪಿಗಳು ದುಬೈಯಿಂದ ವಿಮಾನದಲ್ಲಿ ಕೋಝಿಕ್ಕೋಡ್‌ಗೆ ತೆರಳಿ ಅಲ್ಲಿಂದ ಕೇರಳ ಬಸ್ ಮೂಲಕ ಮಂಗಳೂರು ಕೆಎಸ್ಸಾರ್ಟಿಸಿಗೆ ಬಂದಿಳಿದಿದ್ದರು. ಮಂಗಳೂರಿನಿಂದ ಭಟ್ಕಳಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದಾಗ ಅಕ್ರಮ ಚಿನ್ನ ಸಾಗಾಟ ಬಗ್ಗೆ ಖಚಿತ ಮಾಹಿತಿ ಪಡೆದ ನಗರ ಅಪರಾಧ ಪತ್ತೆದಳ (ಸಿಸಿಬಿ) ಮತ್ತು ಬರ್ಕೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News