×
Ad

ಜುಗಾರಿ: ಮೂವರ ಬಂಧನ

Update: 2020-02-29 22:04 IST

ಗಂಗೊಳ್ಳಿ, ಫೆ.29: ಹೊಸಾಡು ಗ್ರಾಮದ ಮೀನು ಫ್ಯಾಕ್ಟರಿ ಬಳಿ ಫೆ.28 ರಂದು ಸಂಜೆ ವೇಳೆ ಇಸ್ಪೀಟು ಜುಗಾರಿ ಆಡುತ್ತಿದ್ದ ಮೂವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕಂಚುಗೋಡುವಿನ ಶೇಷಪ್ಪಯ್ಯ ಖಾರ್ವಿ(55), ಜಯ ಖಾರ್ವಿ(42), ಶಿವರಾಜ್ ಖಾರ್ವಿ(26) ಬಂಧಿತ ಆರೋಪಿಗಳು. ಇವರಿಂದ 570ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News