×
Ad

ಉಡುಪಿ: ಚಿತ್ತಾಕರ್ಷಿಸಿ, ಮನಮುದಗೊಳಿಸುವ ಫಲಪುಷ್ಪ ಪ್ರದರ್ಶನ

Update: 2020-02-29 22:17 IST

ಉಡುಪಿ, ಫೆ.29: ನಗರದ ದೊಡ್ಡಣಗುಡ್ಡೆಯಲ್ಲಿರುವ ತೋಟಗಾರಿಕಾ ಇಲಾಖೆಯ ರೈತ ಸೇವಾ ಕೇಂದ್ರದ ಆವರಣದಲ್ಲಿ ಶನಿವಾರದಿಂದ ಮೂರು ದಿನಗಳ ಕಾಲ ನಡೆಯುವ ಜಿಲ್ಲಾಮಟ್ಟದ ಫಲಪುಷ್ಪಪ್ರದರ್ಶನ ವರ್ಣರಂಜಿತ ಪುಷ್ಪಗಳಿಂದ ಚಿತ್ತಾಕ ರ್ಷಿಸಿ, ಮನಮುದಗೊಳಿಸುವ ಮೂಲಕ ಸಾರ್ವಜನಿಕರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.

ಫಲಪುಷ್ಪ ಪ್ರದರ್ಶನದಲ್ಲಿ ಕಲ್ಲಂಗಡಿ ಹಣ್ಣುಗಳಲ್ಲಿ ರಚಿಸಿರುವ ಪೇಜಾವರ ಮಠಾಧೀಶರಾದ ಶ್ರೀವಿಶ್ವೇಶ್ವತೀರ್ಥರ ಚಿತ್ರ ಸೇರಿದಂತೆ, ಲಾಲ್‌ಬಹದ್ದೂರ್ ಶಾಸ್ತ್ರಿ, ವಿವೇಕಾನಂದ, ಸುಬಾಷ್‌ಚಂದ್ರ ಬೋಸ್, ಭಗತ್ ಸಿಂಗ್, ಸರ್.ಎಂ. ವಿಶ್ವೇಶ್ವರಯ್ಯ, ಅಟಲ್ ಬಿಹಾರಿ ವಾಜಪೇಯಿ , ನರೇಂದ್ರ ಮೋದಿ, ವಿರಾಟ್ ಕೊಹ್ಲಿ, ಕುವೆಂಪು, ವಿಂಗ್‌ಕಮಾಂಡರ್ ಅಭಿನಂದನ್, ಶ್ರೀಕೃಷ್ಣ , ಹನುಮಾನ್, ಪೇಜಾವರ ಕಿರಿಯ ಶ್ರೀಗಳು,ಯಕ್ಷಗಾನ ಕುರಿತ ಮುಖಚಿತ್ರ, ಕುಂಬಳಕಾಯಿ ಯಲ್ಲಿ ರಚಿಸಲಾದ ಶಿವಲಿಂಗ ಮತ್ತು ನವಿಲುಗಳ ಆಕೃತಿಗಳು ನೆಡುಗರ ಗಮನ ಸೆಳೆಯುತ್ತಿವೆ.

ಗುಲಾಬಿ, ಸೇವಂತಿಗೆ, ಚೆಂಡು ಹೂ, ಗ್ಲಾಡಿಯೋಲಸ್, ಕಾರ್ನೇಶನ್ ಹೂಗಳಿಂದ ರಚಿತವಾದ 24 ಅಡಿ ಉದ್ದದ ಹಡಗಿನ ಕಲಾಕೃತಿಗಾಗಿ 30,000 ಹೂಗಳನ್ನು ಬಳಸಲಾಗಿದೆ. ವಿವಿಧ ಬಗೆಯ, ವಿವಿಧ ಬಣ್ಣಗಳ ಹೂಗಳಿಂದ ರಚಿಸಿರುವ ಅಕ್ಟೋಪಸ್, ಜೋಡಿ ಮೀನುಗಳ ಕಲಾಕೃತಿ, ಸಮುದ್ರ ಕುದುರೆ, ಸಮುದ್ರದ ಚಿಪ್ಪಿನಲ್ಲಿನ ಮುತ್ತು, ಸ್ಟಾರ್ ಫಿಶ್ ಮಾದರಿ ಸೇರಿದಂತೆ, ಸೆಲ್ಫಿ ಮತ್ತು ಪೋಟೋಪ್ರಿಯರಿಗಾಗಿ ವಿವಿಧ ಬಗೆಯ ಹೂಗಳಿಂದ ರಚಿಸಿರುವ ಹೃದಯ ಮಾದರಿಯ ಕಲಾಕೃತಿಗಳ ಮುಂದೆ ಸಾರ್ವಜನಿಕರು ಮತ್ತು ಮಕ್ಕಳು ಪೋಟೋ ತೆಗೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ.

ಫಲಪುಷ್ಪಪ್ರದರ್ಶನ ಆವರಣದ ಹಿಂಭಾಗದಲ್ಲಿ ಕೃಷಿ ಸಂಬಂದಿತ ಇಲಾಖೆ ಗಳ ವಿವಿಧ ಯೋಜನೆಗಳ ಕುರಿತು ವಸ್ತುಪ್ರದರ್ಶನ, ನರ್ಸರಿ ಗಿಡಗಳ ಮಾರಾಟ ಮತ್ತು ಪ್ರದರ್ಶನ, ವಿವಿಧ ಬೀಜಗಳ ಮಾರಾಟ ಮಳಿಗೆಗಳಿದ್ದು, ಕೃಷಿ ಮತ್ತು ತೋಟಗಾರಿಕೆ ಆಸಕ್ತರಿಗೆ ಸಮಗ್ರ ಮಾಹಿತಿ ದೊರೆಯುತ್ತಿದೆ.

ರವಿವಾರ ಫಲಪುಷ್ಪ ಪ್ರದರ್ಶನದ ಪ್ರಯುಕ್ತ ಬೆಳಗ್ಗೆ 10 ಕ್ಕೆ ಸಾರ್ವಜನಿ ರಿಗೆ ಪುಷ್ಪ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಸಾರ್ವಜನಿಕರು ವಿವಿಧ ಬಗೆಯ ಹೂವಿನ ರಂಗೋಲಿ ರಚಿಸುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿ ಸುಬಹುದಾಗಿದೆ. ತೋಟಗಾರಿಕಾ ಬೆಳೆಗಳಲ್ಲಿ ಲಾಭದಾಯಕ ಮಿಶ್ರ ಬೇಸಾಯ ಕುರಿತಂತೆ ಮಾ.2ರಂದು ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News