×
Ad

ನಗರಸಭೆ: ಘನತ್ಯಾಜ್ಯವಸ್ತು ನಿರ್ವಹಣಾ ನಿಯಮ ಉಲ್ಲಂಘಿಸಿದಲ್ಲಿ ದಂಡ

Update: 2020-02-29 22:20 IST

ಉಡುಪಿ, ಫೆ.29: ಘನತ್ಯಾಜ್ಯ ನಿರ್ವಹಣೆಯ ಬಗ್ಗೆ ಕರ್ನಾಟಕ ಪುರಸಬೆಗಳ ಅಧಿನಿಯಮ 1964ರ ಪ್ರಕರಣ 325ರ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರಕಾರ ಉಪವಿಧಿಗಳನ್ನು ರಚಿಸಿದ್ದು, ಈ ಉಪವಿಧಿಯಂತೆ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆಯ ಸೇವಾಶುಲ್ಕ ಹಾಗೂ ಘನತ್ಯಾಜ್ಯ ವಸ್ತು ನಿರ್ವಹಣಾ ನಿಯಮ ಗಳನ್ನು ಉಲ್ಲಂಘಿಸಿದಲ್ಲಿ ದಂಡ/ ಜುಲ್ಮಾನೆಗಳನ್ನು ವಿಧಿಸಲಾಗುವುದು.

 ಸೇವಾ ಶುಲ್ಕ ಮತ್ತು ದಂಡ/ ಜುಲ್ಮಾನೆಗಳು ಎಪ್ರಿಲ್ 1ರಿಂದ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಜಾರಿಗೆ ಬರುತ್ತದೆ. ಹೆಚ್ಚಿನ ಮಾಹಿತಿಗಳನ್ನು ವೆಬ್‌ಸೈಟ್- www.udupicity.gov.in -ನಿಂದ ಪಡೆದುಕೊಳ್ಳಬಹುದು ಎಂದು ಉಡುಪಿ ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News