×
Ad

ದೆಹಲಿ ಹತ್ಯಾಕಾಂಡ ಖಂಡಿಸಿ ಬಂಟ್ವಾಳದ ವಿವಿಧೆಡೆ ಮೊಂಬತ್ತಿ ಪ್ರತಿಭಟನೆ

Update: 2020-02-29 22:28 IST

ಬಂಟ್ವಾಳ, ಫೆ.29: ದೆಹಲಿ ಹತ್ಯಾಕಾಂಡ ಹಾಗೂ ವಸತಿ ಮತ್ತು ಧಾರ್ಮಿಕ ಕೇಂದ್ರಗಳಿಗೆ ಬೆಂಕಿ ಹಚ್ಚಿ ನಾಶ ಮಾಡಿರುವ ಕೃತ್ಯ ವನ್ನು ಖಂಡಿಸಿ ಸಂವಿಧಾನ ಸಂರಕ್ಷಣಾ ಸಮಿತಿ ಬಂಟ್ವಾಳ ಇದರ ವತಿಯಿಂದ ತಾಲೂಕಿನ ಫರಂಗಿಪೇಟೆ, ತುಂಬೆ, ಕೈಕಂಬ, ಕಲ್ಲಡ್ಕ, ಅಮ್ಮುಂಜೆ, ಸಜಿಪದಲ್ಲಿ ಏಕಕಾಲಕ್ಕೆ ಮೊಂಬತ್ತಿ ಹಿಡಿದು ಪ್ರತಿಭಟನೆ ನಡೆಸಲಾಯಿತು.

ದೆಹಲಿ ಪೊಲೀಸರು ಹಾಗೂ ಸಂಘಪರಿವಾರದ ವಿರುದ್ಧ ಘೋಷಣೆಗಳಿರುವ ಭಿತ್ತಿ ಪತ್ರ ಹಿಡಿದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟ ನಕಾರರು, ಹಿಂಸೆ, ಹತ್ಯಾಕಾಂಡಗಳನ್ನು ನಡೆಸುವ ಮೂಲಕ ಜನರನ್ನು ಭೀತಿಗೊಳಿಸುವುದಾಗಲಿ, ಜನಪರವಾದ ಹೋರಾಟ ವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಹೋರಾಟವು ಇನ್ನಷ್ಟು ತೀವ್ರಗೊಳ್ಳಲಿದೆ. ಕಾಯ್ದೆಯನ್ನು ಹಿಂಪಡೆಯುವವರೆಗೆ ಹೋರಾಟ ನಿಲ್ಲದು ಎಂದು ಹೇಳಿದರು.

ದೆಹಲಿ ಹತ್ಯಾಕಾಂಡ ಹಾಗೂ ಹಿಂಸೆಗೆ ಕಾರಣವಾದ ಎಲ್ಲಾ ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಬೇಕು. ಸೂಕ್ತ ಕಾನೂನು ಕ್ರಮ ಜರಗಿಸುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಬೇಕು. ದೆಹಲಿಯ ನಾಗರಿಕರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಫರಂಗಿಪೇಟೆ ಜುಮಾ ಮಸೀದಿ ವಠಾರದಲ್ಲಿ ನಡೆದ ಪ್ರತಿಭಟನೆಯಲ್ಲಿ ಶರೀಫ್ ಅಮೆಮ್ಮಾರ್, ಸಂವಿಧಾನ ಸಂರಕ್ಷಣಾ ಸಮಿತಿ ಉಪಾಧ್ಯಕ್ಷ ಮುಹಮ್ಮದ್ ಬಾವ, ಜುಮಾ ಮಸೀದಿ ಕೋಶಾಧಿಕಾರಿ ಮಜೀದ್, ಬುಖಾರಿ ಕುಂಪನಮಜಲು, ಅಬೂಬಕರ್, ಸುಲೈಮಾನ್ ಉಸ್ತಾದ್ ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು.

ತುಂಬೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ತುಂಬೆ ಜುಮಾ ಮಸೀದಿ ಖತೀಬ್ ಅಬ್ದುಲ್ ಲತೀಫ್ ಫೈಝಿ, ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಟಿ.ಕೆ ಶರೀಫ್, ಸಮಿತಿ ಕಾರ್ಯದರ್ಶಿ ಇರ್ಫಾನ್,  ತುಂಬೆ ಜುಮಾ ಮಸೀದಿ ಅಧ್ಯಕ್ಷ ಇಮ್ತಿಯಾಝ್ ಆಲ್ಫಾ, ಪ್ರಧಾನ ಕಾರ್ಯದರ್ಶಿ ಮೂಸಬ್ಬ, ಸದಸ್ಯ ಅಝೀಝ್, ತುಂಬೆ ಗ್ರಾಪಂ ಸದಸ್ಯ ಝಹೂರ್ ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು.

ಕೈಕಂಬದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಉಪಾಧ್ಯಕ್ಷ ಅಬೂಬಕರ್ ಕೆ.ಎಚ್., ಸಮಿತಿ ಕಾರ್ಯದರ್ಶಿ ಲುಕ್ಮಾನ್,  ಪ್ರಧಾನ ಕಾರ್ಯದರ್ಶಿ ಮುನೀಶ್ ಅಲಿ, ಖಜಾಂಚಿ ಮುಹಮ್ಮದ್ ಸಾಗರ್ ಪರ್ಲಿಯಾ, ಕಾರ್ಯದರ್ಶಿ ಶಾಹುಲ್ ಹಮೀದ್ ಎಸ್.ಎಚ್., ಸಮಿತಿ ಸದಸ್ಯ ರಹೀಂ ಪಿ.ಎ., ಅನ್ವರ್ ಕಲ್ಲಂಗಲ, ಸಾಹುಲ್ ಹಮೀದ್ ಪರ್ಲಿಯ ಮತ್ತು ಊರಿನ ನಾಗರಿಕರು ಉಪಸ್ಥಿತರಿದ್ದರು.

ಕಲ್ಲಡ್ಕ ಮಸೀದಿ ವಠಾರದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಲ್ಲಡ್ಕ ಜುಮಾ ಮಸೀದಿ ಖತೀಬ್ ಶೇಕ್ ಮುಹಮ್ಮದ್ ಇರ್ಫಾನ್ ಅಝ್ಹರಿ, ಸಂವಿಧಾನ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ಇಮ್ತಿಯಾಝ್ ಗೋಳ್ತಮಜಲು, ಮಸೀದಿಯ ಪ್ರಧಾನ ಕಾರ್ಯದರ್ಶಿ ಹಮೀದ್ ಗೋಲ್ಡನ್, ಮಸೀದಿ ಸಮಿತಿ ಸದಸ್ಯ ಹುಸೈನ್, ಜವಾಝ್, ಗೋಳ್ತಮಜಲು ಗ್ರಾಪಂ ಸದಸ್ಯ ಯೂಸುಫ್ ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು.

ಅಮ್ಮುಂಜೆ ಮಸೀದಿ ವಠಾರದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಮಿತಿ ಸದಸ್ಯ ಉಸ್ಮಾನ್ ಕಲಾಯಿ, ಎನ್.ಆರ್.ಸಿ. ವಿರೋಧಿ ಹೋರಾಟ ಸಮಿತಿ ಅಮ್ಮುಂಜೆ ಅಧ್ಯಕ್ಷ ಅಬೂಬಕರ್ ಪಿಡಬ್ಲ್ಯೂಡಿ, ಎಂ.ಟಿ.ಹಕೀಂ ಕಲಾಯಿ, ಬಿ.ಎಚ್.ಆದಮ್ , ಬಿ.ಎಚ್.ಸಲಾಂ, ಪಂಚಾಯತ್ ಸದಸ್ಯರಾದ ನವಾಝ್, ಅಬ್ದುಲ್ ರಝಾಕ್ ಟಿ.ಎಚ್. ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು.

ಸಜಿಪದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಜಿಪನಡು ಗ್ರಾಪಂ ಅಧ್ಯಕ್ಷ ನಾಸಿರ್ ಸಜಿಪ, ಸಂವಿಧಾನ ಸಂರಕ್ಷಣಾ ಸಮಿತಿ ಸದಸ್ಯ ನೌರಿಶ್ ಸಜಿಪ, ಟಿಪ್ಪು ಗೈಸ್ ಅಧ್ಯಕ್ಷ ಸ್ವದಕತುಲ್ಲಾ, ಸಜಿಪ ಗ್ರಾಪಂ ಸದಸ್ಯ ಎಸ್.ಎನ್ ಅಬ್ದುಲ್ ರಹ್ಮಾನ್, ಇಕ್ಬಾಲ್ ಬೈಲ ಗುತ್ತು, ಅಬ್ದುಲ್ ರಶೀದ್, ರಿಕ್ಷಾ ಚಾಲಕ ಮತ್ತು ಮಾಲಕ ಸಂಘದ ಅದ್ಯಕ್ಷ ಎಸ್.ಕೆ.ಬಶೀರ್ ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News