ಡಾಮರೀಕರಣ : ಮಾ. 2ಕ್ಕೆ ಮೂಡುಬಿದಿರೆಯಲ್ಲಿ ರಸ್ತೆ ಬದಲಿ ವ್ಯವಸ್ಥೆ
ಮೂಡುಬಿದಿರೆ : ಇಲ್ಲಿನ ಆಲಂಗಾರಿನಿಂದ ಮೂಡುಬಿದಿರೆ ಸ್ವರಾಜ್ ಮೈದಾನದ ವರೆಗಿನ ರಾಷ್ಟ್ರೀಯ ಹೆದ್ದಾರಿಯ ಡಾಮರೀಕರಣ ಕಾಮಾಗಾರಿಯು ಮಾ. 3ರಂದು ನಡೆಯಲಿರುವುದರಿಂದ ಬದಲಿ ರಸ್ತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಮೂಡುಬಿದಿರೆಯ ಪೊಲೀಸ್ ಪ್ರಕಟನೆ ತಿಳಿಸಿದೆ.
ತಾಲೂಕಿನ ಸ್ವರಾಜ್ ಮೈದಾನದ ಬಳಿಯಿಂದ ಆಲಂಗಾರ್ ಜಂಕ್ಷನ್‍ವರೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 169ರ ಡಾಮರೀಕರಣ ಕಾಮಗಾರಿಯು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಡೆಯಲಿದೆ. ಆದ್ದರಿಂದ ಈ ಮಧ್ಯೆ ಮೂಡುಬಿದಿರೆ ಮೂಲಕ ಕಾರ್ಕಳ ಕಡೆಗೆ ಹೋಗುವ ವಾಹನಗಳು ರಿಂಗ್ ರಸ್ತೆಯ ಮೂಲಕ ಕಾರ್ಕಳ ಕಡೆಗೆ ಮುಂದುವರೆಯಲು ಹಾಗೂ ಕಾರ್ಕಳ ಕಡೆಯಿಂದ ಮಂಗಳೂರು ಮತ್ತು ಬಿ.ಸಿ.ರೋಡ್ ಕಡೆಗೆ ಹೋಗುವ ವಾಹನಗಳು ರಿಂಗ್ ರಸ್ತೆಯಾಗಿ ಇನ್ನರ್‍ವೀಲ್ (ಸ್ವರಾಜ್ ಮೈದಾನದ) ಬಳಿಯಿಂದಾಗಿ ಮೂಡುಬಿದಿರೆ ಹಾಗೂ ಮಂಗಳೂರು ಕಡೆಗೆ ಮುಂದುವರೆಯಲು ಬದಲಿ ರಸ್ತೆ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಾರ್ವಜನಿಕರು ಮಾ. 2ರಂದು ಬೆಳಗ್ಗೆ 7ಗಂಟೆಯಿಂದ ಸಂಜೆ 6ಗಂಟೆಯ ಮಧ್ಯೆ ಬದಲಿ ಮಾರ್ಗದಲ್ಲಿ ಸಂಚರಿಸಲು ಸಹಕಾರ ಕೋರಿದ್ದಾರೆ.