ಮೂಡುಬಿದಿರೆ : ಮೂವರಿಗೆ ಶಿವರಾಮ ಕಾರಂತ ಪುರಸ್ಕಾರ
ಮೂಡುಬಿದಿರೆ : ಖ್ಯಾತ ಚಿಂತನಾಶೀಲ ಲೇಖಕರಾಗಿದ್ದ ಡಾ.ಶಿವರಾಮ ಕಾರಂತರ ಹೆಸರಿನಲ್ಲಿ ಮೂಡುಬಿದಿರೆಯಲ್ಲಿ ಸ್ಥಾಪಿತವಾಗಿರುವ 'ಶಿವರಾಮ ಕಾರಂತ ಪ್ರತಿಷ್ಟಾನ'ವು ಕಳೆದ ಇಪ್ಪತ್ತು ವರುಷಗಳಿಂದ ಪ್ರಕಟವಾಗಿರುವ ಒಳ್ಳೆಯ ಕೃತಿಗೆ ಪ್ರತೀ ವರುಷ ಹತ್ತು ಸಾವಿರ ರೂಪಾಯಿ ಗೌರವ ಸಂಭಾವನೆಯೊಂದಿಗೆ 'ಶಿವರಾಮ ಕಾರಂತ ಪುರಸ್ಕಾರ'ವನ್ನು ನೀಡುತ್ತಾ ಬಂದಿದೆ.
ಈ ವರ್ಷ 'ತಲ್ಲೂರು ಎಲ್ ಎನ್ ' ಪುಸ್ತಕ ಬರೆದ ರಾಜಾರಂ ತಲ್ಲೂರು 'ಬೆಳಗು ಹರಿಯುವ ಮುನ್ನ' ಕಾದಂಬರಿ ಬರೆದ ಡಿ.ಬಿ.ಶಂಕರಪ್ಪ ಮತ್ತು 'ಮೋದಾಳಿ' ನಾಟಕ ಬರೆದ ಪಿ.ಚಂದ್ರಿಕಾ ಅವರುಗಳಿಗೆ ಶಿವರಾಮ ಕಾರಂತ ಪುರಸ್ಕಾರವನ್ನು ನೀಡಲಾ ಗುತ್ತಿದೆ. ಪುರಸ್ಕಾರಗಳ ತಲಾ ಹತ್ತು ಸಾವಿರ ರೂಪಾಯಿಗಳ ಗೌರವ ಸಂಭಾವನೆಗಳನ್ನು ಎಂ.ಸಿ.ಎಸ್. ಬ್ಯಾಂಕ್ ಮೂಡಬಿದ್ರೆ, ಶ್ರೀ ಕೆ. ಶ್ರೀಪತಿ ಭಟ್ ಮತ್ತು ಶ್ರೀಮತಿ ಭಾನುಮತಿ ಶೀನಪ್ಪ ಅವರುಗಳು ಪ್ರಾಯೋಜಿಸಲು ಮುಂದೆ ಬಂದಿದ್ದಾರೆ ಎಂದು ಪ್ರತಿಷ್ಟಾನದ ಪ್ರಧಾನ ಕಾರ್ಯದರ್ಶಿ ಡಾ. ಜಯ ಪ್ರಕಾಶ ಮಾವಿನಕುಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.