ಕಡಬ: ಗೂಡ್ಸ್ ಟೆಂಪೋ ಢಿಕ್ಕಿ ; ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Update: 2020-03-01 12:35 IST
ಕಡಬ: ಗೂಡ್ಸ್ ಟೆಂಪೋ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ದ್ವಿಚಕ್ರ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ 102ನೇ ನೆಕ್ಕಿಲಾಡಿ ಗ್ರಾಮದ ಬೊಳ್ಳೂರು ದೇವಸ್ಥಾನದ ಬಳಿ ರವಿವಾರ ಸಂಭವಿಸಿದೆ.
ಮೃತ ಸವಾರನನ್ನು ರಾಜಸ್ತಾನ ಮೂಲದ ಮೇಘರಾಜ್ ಎಂದು ಗುರುತಿಸಲಾಗಿದೆ.
ಬೊಳ್ಳೂರು ದೇವಸ್ಥಾನದಿಂದ ಮರ್ಧಾಳ ಕಡೆಗೆ ತೆರಳುತ್ತಿದ್ದ 407 ಟೆಂಪೋ ಹಾಗೂ ದ್ವಿಚಕ್ರ ವಾಹನದ ನಡುವೆ ಬೊಳ್ಳೂರು ದೇವಸ್ಥಾನದ ಮುಂದಿನ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಮೇಘರಾಜ್ ಕಡಬಕ್ಕೆ ತೆರಳಿ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿದ್ದಾರೆ.