ದ್ವಿತೀಯ ಟೆಸ್ಟ್ :ಕೊಹ್ಲಿ ಪಡೆಗೆ ಮತ್ತೆ ಸೋಲಿನ ಭೀತಿ

Update: 2020-03-01 08:55 GMT

ಕ್ರೈಸ್ಟ್ ಚರ್ಚ್ , ಮಾ.1:ಇಲ್ಲಿ ನಡೆಯುತ್ತಿರುವ ನ್ಯೂಝಿಲ್ಯಾಂಡ್ ವಿರುದ್ಧದ ಎರಡನೇ  ಕ್ರಿಕೆಟ್ ಟೆಸ್ಟ್ ನಲ್ಲಿ ಭಾರತ ಸೋಲಿನ ಭೀತಿಗೆ ಸಿಲುಕಿದೆ.

ಟೆಸ್ಟ್ ನ ಎರಡನೇ ದಿನವಾಗಿರುವ ರವಿವಾರ  ನ್ಯೂಝಿಲ್ಯಾಂಡ್ ನ್ನು ಮೊದಲ ಇನಿಂಗ್ಸ್ ನಲ್ಲಿ 235 ರನ್ ಗಳಿಗೆ ನಿಯಂತ್ರಿಸಿ 7 ರನ್ ಗಳ ಮುನ್ನಡೆ ಪಡೆದರೂ, ಎರಡನೇ ಇನಿಂಗ್ಸ್ ನಲ್ಲಿ 36 ಓವರ್ ಗಳಲ್ಲಿ 90 ರನ್ ಗಳಿಗೆ 6 ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಹನುಮ ವಿಹಾರಿ ಔಟಾಗದೆ 5 ರನ್ ಮತ್ತು ರಿಷಭ್ ಪಂತ್ ಔಟಾಗದೆ 1 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ಟ್ರೆಂಟ್ ಬೌಲ್ಟ್ (12ಕ್ಕೆ 3), ಟಿಮ್ ಸೌಥಿ(20ಕ್ಕೆ 1), ಗ್ರ್ಯಾಂಡ್ ಹೋಮ್ (2ಕ್ಕೆ 1) ಮತ್ತು ನೀಲ್  ವಾಗ್ನೆರ್ (18ಕ್ಕೆ 1) ದಾಳಿಯನ್ನು ಎದುರಿಸಲಾರದೆ ಭಾರತದ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಪರೇಡ್ ನಡೆಸಿದ್ದಾರೆ  ಪೃಥ್ವಿ ಶಾ 14 ರನ್ , ಮಾಯಾಂಕ್ ಅಗರ್ವಾಲ್ 7 ರನ್ , ಚೇತೇಶ್ವರ್ ಪೂಜಾರ 24 ರನ್ , ವಿರಾಟ್ ಕೊಹ್ಲಿ 14 ರನ್ , ಅಜಿಂಕ್ಯ ರಹಾನೆ 9 ರನ್ , ಉಮೇಶ್ ಯಾದವ್ 1ರನ್ ,ಗಳಿಸಿ ಔಟಾಗಿದ್ದಾರೆ.

ಇದಕ್ಕೂ ಮೊದಲು  ನ್ಯೂಝಿಲ್ಯಾಂಡ್ ತಂಡ 73 .1 ಓವರ್ ಗಳಲ್ಲಿ 235 ರನ್ ಗಳಿಗೆ ಆಲೌಟಾಗಿತ್ತು.  ನ್ಯೂಝಿಲ್ಯಾಂಡ್ ಮೊದಲ ಇನಿಂಗ್ಸ್ ನಲ್ಲಿ ದಿನದಾಟದಂತ್ಯಕ್ಕೆ 23 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 63 ರನ್ ಗಳಿಸಿತ್ತು.

ವೇಗಿ ಮುಹಮ್ಮದ್ ಶಮಿ (81ಕ್ಕೆ 4), ಜಸ್ ಪ್ರೀತ್ ಬುಮ್ರಾ (62ಕ್ಕೆ 3) , ರವೀಂದ್ರ ಜಡೇಜ(22ಕ್ಕೆ 2) ಮತ್ತು ಉಮೇಶ್ ಯಾದವ್ (46ಕ್ಕೆ 1) ದಾಳಿಯ ಮುಂದೆ ನ್ಯೂಝಿಲ್ಯಾಂಡ್ ನ  ಬಹುತೇಕ ಆಟಗಾರರು  ರನ್ ಗಳಿಸಲು ಪರದಾಡಿದರೂ ಟಾಮ್ ಲಥಾಮ್ 52 ರನ್  ಮತ್ತು ಕೈಲ್ ಜಮೀಸನ್ 49 ರನ್, ಟಾಮ್ ಬ್ಲಂಡೆಲ್ 30 ರನ್ ,  ರಾಸ್ ಟೇಲರ್ 15 ರನ್ , ಹೆನ್ರಿ ನಿಕೋಲ್ಸ್ 14 ರನ್ , ಗ್ರ್ಯಾಂಡ್ ಹೋಮ್ 26 ರನ್  ಗಳಿಸಿ ತಂಡದ ಸ್ಕೋರ್ ನ್ನು ಏರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News