×
Ad

ಮಲ್ಲೂರು: ಬ್ಯಾರಿ ಕಲರವ 2020 ಕಾರ್ಯಕ್ರಮ

Update: 2020-03-01 17:25 IST

ಮಂಗಳೂರು: ಸ್ಪಾಟ್ ನ್ಯೂಸ್ ಗ್ರೂಪ್ ಮಲ್ಲೂರು ಇದರ ಆಶ್ರಯದಲ್ಲಿ ಮಲ್ಲೂರು ಮೈದಾನದಲ್ಲಿ ರವಿವಾರ ನಡೆದ ಬ್ಯಾರಿ ಕಲರವ 2020 ಕಾರ್ಯಕ್ರಮವನ್ನು ಶಾಸಕ ಯು.ಟಿ. ಖಾದರ್ ಅವರು ಉದ್ಘಾಟಿಸಿದರು.

ಮಾಜಿ ಸಚಿವ ರಮಾನಾಥ ರೈ ಮಾತನಾಡಿ,  ಸೇವೆ ಮಾಡುವ ಸಂಘಟನೆ ಗಳಿಗೆ ಟೀಕೆ ಟಿಪ್ಪಣಿ ಇರುವುದು ಸ್ವಾಭಾವಿಕ. ಆದರೆ ಟೀಕೆಯ ಕಡೆ ಗಮನ ಕೊಡದೇ ಸೇವೆ ಮಾಡುವುದರಲ್ಲಿ ನಿರತರಾಗಬೇಕು. ದ್ವೇಷದ ಭಾಷಣ ಮಾಡಿ ನಾಯಕನಾಗುವುದು ಬೇಡ. ಪ್ರೀತಿಯ ಭಾಷಣ ಮಾಡಿ ನಾಯಕನಾದರೆ ಸಾಕಾಗುತ್ತದೆ. ಸಮಾಜದಿಂದ ಒಂದು ಸಮುದಾಯವನ್ನು ಹೊರಗಿಟ್ಟು ಸಂವಿಧಾನ ರಚಿಸುವ ಅಗತ್ಯವಿಲ್ಲ. ಅದಕ್ಕೆ ಅರ್ಥ ಕೂಡ ಇಲ್ಲ ಎಂದು ವಿರೇಂದ್ರ ಹೆಗ್ಗಡೆ ಹೇಳಿದ್ದರು. ಈ ಮಾತು ಎಷ್ಟು ಅರ್ಥ ಪೂರ್ಣವಾಗಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕ ಮಂಗಳೂರು ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಅಧ್ಯಕ್ಷ ಅಬ್ದುಲ್ ಸತ್ತಾರ್ ವಹಿಸಿದ್ದರು.

ಈ ಸಂದರ್ಭದಲ್ಲಿ ಅಕ್ಷರ ಸಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು. ಭಾರತೀಯ ಸೈನಿಕ ಸುನೀಲ್ ಕುಮಾರ್ ಮಲ್ಲೂರು, ಪೈಲಟ್ ಸಲಾಮತ್ ಅಲಿ ಮುಹಮ್ಮದ್ ಅಕ್ಬರ್ ಮತ್ತು ಗಲ್ಫ್ ಗೈಸ್ ಸೆಂಟ್ರಲ್ ಕಮಿಟಿ ಮಲ್ಲೂರು ಗೆ ಸ್ಪಾಟ್ ನ್ಯೂಸ್ ಅವಾರ್ಡ್  ನೀಡಿ ಗೌರವಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಎಂ.ಕೆ. ಯೂಸುಫ್ ಬದ್ರಿಯಾ ನಗರ, ಎನ್.ಇ.ಮುಹಮ್ಮದ್ ಬದ್ರಿಯಾ ನಗರ, ನಿಝಾಮುದ್ದೀನ್ ಚಿಕ್ಕ ಮಂಗಳೂರು, ಮುಹಮ್ಮದ್ ಶರೀಫ್ ಕಲಾಯಿ, ರಮೇಶ್ ಆಳ್ವ ಕಜೆ, ಉಸ್ಮಾನ್ ಬಡಕಬೈಲ್, ಎಂ.ಕೆ.ಅಬ್ದುಲ್ ಲತೀಫ್ ಬದ್ರಿಯಾ ನಗರ, ಶಮೀಮ್ ಕುಟ್ಟಿ ಕಳ, ಗ್ರಾ.ಪಂ.ಸದಸ್ಯರಾದ ಡಿ.ಅಹಮ್ಮದ್ ಆಲಿಯಬ್ಬ ,ಎಂ.ಎಚ್ ಹಸನ್ ಬಾವ ಮಲ್ಲೂರು, ಅಬ್ದುಲ್ಲಾ ಬೊಲ್ಲಂಕಿನಿ ದ.ಕ.ರೇಂಜ್ ಸಮಿತಿ ಉಪಾಧ್ಯಕ್ಷ ಎಂ.ಎ.ಮುಹಮ್ಮದ್ ಉದ್ದಬೆಟ್ಟು ಅವರಿಗೆ ಸನ್ಮಾನ ಮಾಡಲಾಯಿತು.

ಎಂ.ಕೆ.ಜಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ದಲ್ಲಿ ಚಿತ್ತರಂಜನ್ ರೈ, ಶೈಲೇಂದ್ರ ವೈ ಸುವರ್ಣ, ಉದ್ಯಮಿ ಇಸ್ಮಾಯಿಲ್ ಕಂಕನಾಡಿ, ಸುಧೀರ್ ರಾವ್ ದೆಮ್ಮಲೆ, ಎಸ್ ಎಂ ಫಾರೂಕ್, ಅಥಾವುಲ್ಲ ಜೋಕಟ್ಟೆ, ಆಶಿಕ್ ಕುಕ್ಕಾಜೆ, ಫ್ರಾನ್ಸಿಸ್ ಕುಟಿನ್ಹ, ಮುಹಮ್ಮದ್ ಯುಬಿ, ಉಮೇಶ್ ಬೆಂಜನಪದವು, ಎನ್.ಇ.ಮಹಮ್ಮದ್, ಸ್ವಾಲೀಹ್  ಬಿ.ಸಿ.ರೋಡ್, ಮುಸ್ತಫಾ ಅಡ್ಡೂರು ಮೊದಲಾದವರು ಉಪಸ್ಥಿತರಿದ್ದರು.

ಅಲ್ತಾಫ್ ದೆಮ್ಮಲೆ ಸ್ವಾಗತಿಸಿದರು.ಬಿ.ಎ.ಮಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.ಎಂ.ಜಿ.ಬಶೀರ್ ಗಾಣೆಮಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News