ಅಮಿತ್ ಶಾ ‘ಗೋ ಬ್ಯಾಕ್ ’: ಕೊಲ್ಕತ್ತಾದಲ್ಲಿ ಪ್ರತಿಭಟನೆ

Update: 2020-03-01 14:55 GMT
ಫೈಲ್ ಚಿತ್ರ

ಇಂದು ಬೆಳಗ್ಗೆ ಅಮಿತ್‌ಶಾ ಕೋಲ್ಕತಾಗೆ ಆಗಮಿಸುತ್ತಿದ್ದಂತೆಯೇ ನೇತಾಜಿ ಸುಭಾಶ್ಚಂದ್ರ ಭೋಸ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಹೊರಗೆ ಜಮಾಯಿಸಿದ್ದ ನೂರಾರು ಎಡ ರಂಗ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಿಎಎ ವಿರೋಧಿ ಭಿತ್ತಿಪತ್ರಗಳು ಹಾಗೂ ಕರಿಪತಾಕೆಗಳನ್ನು ಹಿಡಿದು, ಕೇಂದ್ರ ಗೃಹ ಸಚಿವರ ವಿರುದ್ಧ ‘ಗೋಬ್ಯಾಕ್’ (ಹಿಂತಿರುಗಿ) ಎಂಬುದಾಗಿ ಘೋಷಣೆಗಳನ್ನು ಕೂಗತೊಡಗಿದರು.

 ತದನಂತರ ಕೆಲವು ಪ್ರತಿಭಟನಕಾರರು ತಡೆ ಬೇಲಿಗಳನ್ನು ಮುರಿದು ಅಮಿತ್‌ಶಾ ಅವರ ರ್ಯಾಲಿ ನಡೆಯಲಿದ್ದ ಶಹೀದ್ ಮಿನಾರ್ ಮೈದಾನವನ್ನು ಪ್ರವೇಶಿಲು ಯತ್ನಿಸಿದಾಗ ಪೊಲೀಸರಿಗೂ ಅವರಿಗೂ ಸಣ್ಣ ಮಟ್ಟದ ಹೊಯ್ ಕೈ ನಡೆಯಿತು.

ಪ.ಬಂಗಾಳಕ್ಕೆ ಅಮಿತ್‌ಶಾ ಭೇಟಿ ವಿರೋಧಿಸಿ ದಕ್ಷಿಣ ಕೋಲ್ಕತಾದ ಸಂತೋಷ್‌ಪುರ ಪ್ರದೇಶದಲ್ಲಿ ಸಿಪಿಎಂ ಶಾಸಕಾಂಗ ಪಕ್ಷದ ನಾಯಕ ಸುಜನ್ ಚಕ್ರವರ್ತಿ ಅವರು ಬೆಕ್‌ಬಾಗನ್‌ನಿಂದ ಪಾರ್ಕ್ ಸರ್ಕಸ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು ಹಾಗೂ ಕೇಂದ್ರ ಗೃಹ ಸಚಿವ ಪ್ರತಿಕೃತಿ ದಹಿಸಿದರು. ಸಿಪಿಎಂಗೆ ನಿಷ್ಠವಾದ ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ಹಾಗೂ ಯುವಜನಸಂಘಟನೆ ಡಿವೈಎಫ್‌ಐ ಕಾರ್ಯಕರ್ತರು ಶ್ಯಾಮಬಝಾರ್, ಗರಿಯಾಹಾಟ್, ಬೆಹಲಾ, ಕೈಕಾಳಿ ಹಾಗೂ ಎಂಟಾಲಿ ಪ್ರದೇಶಗಳಲ್ಲಿ ರ್ಯಾಲಿಗಳನ್ನು ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News