ಪರ್ಯಾಯ ಅದಮಾರು ಮಠಕ್ಕೆ ಹೊರೆಕಾಣಿಕೆ ಸಮರ್ಪಣೆ
Update: 2020-03-01 20:27 IST
ಉಡುಪಿ, ಮಾ.1: ಉಡುಪಿ ಶ್ರೀಕೃಷ್ಣ ಮಠ, ಪರ್ಯಾಯ ಅದಮಾರು ಮಠಕ್ಕೆ ಅಲೆವೂರು ಮತ್ತು ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ರವಿವಾರ ಹೊರೆಕಾಣಿಕೆಯನ್ನು ಸಮರ್ಪಿಸಿದರು.
ಅಲೆವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೋಕ್ತಸರ ಡಾ.ಕೃಷ್ಣರಾಜ ಭಟ್, ಅರ್ಚಕರಾದ ಲಕ್ಷ್ಮೀನಾರಯಣ ಉಪಾಧ್ಯಾಯ, ಅಭಿಮಾನ್ ಸ್ಪೋರ್ಟ್ಸ್ ಕ್ಲಬ್ಬಿನ ನಾರಾಯಣ ಶೆಟ್ಟಿಗಾರ್, ಅಲೆವೂರು ಸಮುದಾಯದ ಹರೀಶ್ ಕುಲಾಲ್ ನೇತೃತ್ವದಲ್ಲಿ ಸಂಸ್ಕೃತ ಕಾಲೇಜಿನಿಂದ ಮೆರವಣಿಗೆಯಲ್ಲಿ ಹೊರೆಕಾಣಿಕೆ ತಂದು ಅರ್ಪಿಸಲಾಯಿತು.
ಹೊರೆಕಾಣಿಕೆ ನೀಡಿದ ಭಕ್ತಾಧಿಗಳಿಗೆ ರಾಜಾಂಗಣದಲ್ಲಿ ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಅನುಗ್ರಹ ಮಂತ್ರಾಕ್ಷತೆ ನೀಡಿದರು. ಈ ಸಂದರ್ಭದಲ್ಲಿ ಶ್ರೀಕೃಷ್ಣ ಸೇವಾ ಬಳಗದ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.