ಸಮುದ್ರದಲ್ಲಿ ಮುಳುಗಿ ಮೃತ್ಯು
Update: 2020-03-01 20:49 IST
ಕುಂದಾಪುರ, ಮಾ.1: ಸಮುದ್ರದ ಅಲೆಗೆ ಸಿಲುಕಿ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಫೆ.29ರಂದು ಕೋಡಿ ಬೀಚ್‌ನಲ್ಲಿ ನಡೆದಿದೆ.
ಮೃತರನ್ನು ವಡೇರಹೊಬಳಿ ಗ್ರಾಮದ ಟಿಟಿ ರಸ್ತೆಯ ನಿವಾಸಿ ರತ್ನಾಕರ ಸೇರೆಗಾರ್ ಎಂಬವರ ಮಗ ಅಜಿತ್ ಎಂದು ಗುರುತಿಸ ಲಾಗಿದೆ. ಎಪ್ರಿಲ್ ತಿಂಗಳಲ್ಲಿ ವಿವಾಹವಾಗಿದ್ದ ಇವರು ಮುಂಬೈಯಲ್ಲಿ ಲಾಜಿಸ್ಟಿಕ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದರು.
ಪತ್ನಿ ಜೊತೆ ಮುಂಬೈಯಲ್ಲಿ ವಾಸವಾಗಿರುವ ಇವರು, ಫೆ.28ರಂದು ಊರಿಗೆ ಬಂದಿದ್ದರು. ಫೆ.29ರಂದು ಕೋಡಿ ಬೀಚ್‌ಗೆ ತೆರಳಿದ್ದ ಇವರು, ಸಮುದ್ರದ ಅಲೆಗೆ ಸಿಲುಕಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಈಜು ಬಾರದ ಕಾರಣ ಮುಳುಗಿ ಮೃತಪಟ್ಟಿರು ವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.