ಸ್ಕೂಟರ್‌ಗಳ ಮಧ್ಯೆ ಅಪಘಾತ: ಓರ್ವ ಸವಾರ ಮೃತ್ಯು
Update: 2020-03-01 20:51 IST
ಪಡುಬಿದ್ರಿ, ಮಾ.1: ಪಡುಬಿದ್ರಿ ಎಸ್.ಎಸ್.ಬಾರ್ ಎದುರು ಫೆ.29ರಂದು ರಾತ್ರಿ 11ಗಂಟೆ ಸುಮಾರಿಗೆ ಎರಡು ಸ್ಕೂಟರ್‌ಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸವಾರ ಮೃತಪಟ್ಟು ಮೂವರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಮೃತರನ್ನು ದೇವೇಂದ್ರ(34) ಎಂದು ಗುರುತಿಸಲಾಗಿದೆ. ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ಜಗದೀಶ್, ಇಬ್ಬರು ಮಕ್ಕಳೊಂದಿಗೆ ಬಂದು ಹೆಜಮಾಡಿ ಕಡೆಗೆ ಹೋಗಲು ಯಾವುದೇ ಸೂಚನೆ ನೀಡದೆ ಚಲಾಯಿಸಿದ್ದು, ಆಗ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ದೇವೇಂದ್ರ ಅವರ ಟಿವಿಎಸ್ ಜುಪಿಟರ್ ಸ್ಕೂಟರ್, ಜಗದೀಶ್ ಸ್ಕೂಟರ್‌ಗೆ ಢಿಕ್ಕಿ ಹೊಡೆಯಿತ್ತೆ ನ್ನಲಾಗಿದೆ.
ಇದರಿಂದ ಎರಡು ಸ್ಕೂಟರ್ ರಸ್ತೆ ಬಿದ್ದು ನಾಲ್ವರು ಗಾಯಗೊಂಡರು. ಅದರಲ್ಲಿ ಗಂಭೀರವಾಗಿ ಗಾಯಗೊಂಡ ದೇವೇಂದ್ರ ಉಡುಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಪಡುಬಿದ್ರಿ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ