ಬಂದರ್: ಉಚಿತ ನೇತ್ರ ತಪಾಸಣೆ ಶಿಬಿರ
ಮಂಗಳೂರು, ಮಾ.1: ಜಮೀಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕ ಮತ್ತು ದ.ಕ. ಜಿಲ್ಲಾ ಅಂಧರ ಸೇವಾ ಸಂಘವು ಕಂಡತ್ತಪಳ್ಳಿ ಫ್ರೆಂಡ್ಸ್ ಸರ್ಕಲ್ ಮತ್ತು ಬಂದರ್ ಫ್ರೆಂಡ್ಸ್ ಇದರ ಸಹಯೋಗದೊಂದಿಗೆ ನಗರ ಬಂದರ್ ವಾರ್ಡ್‌ನ ಕ್ರೆಸೆಂಟ್ ಶಾಲೆಯಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಆಯೋಜಿಸಿತು.
ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ಅಬೂಬಕರ್ ಸಿದ್ದೀಕ್ ಶಿಬಿರವನ್ನು ಉದ್ಘಾಟಿಸಿದರು.
ಅಂಧರ ಸೇವಾ ಸಂಘ ಅಧ್ಯಕ್ಷ ಗುರುರಾಜ್ ರಾವ್ ಕಣ್ಣಿನ ರಕ್ಷಣೆ ಮತ್ತು ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿ ಸ್ಥಳೀಯ ಕಾರ್ಪೊರೇಟರ್ ಝೀನತ್ ಶುಭ ಹಾರೈಸಿದರು.
ಜಮೀಯ್ಯತುಲ್ ಫಲಾಹ್ ಕೋಶಾಧಿಕಾರಿ ಸಾಲಿ ಕೋಯ ಮತ್ತು ಶಿಬಿರದ ಸಂಚಾಲಕ ಬಿ.ಎಸ್.ಮುಹಮ್ಮದ್ ಬಶೀರ್, ಕಂಡತ್ತಪಳ್ಳಿ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಸಂಶುದ್ದೀನ್ ಮತ್ತು ಬಂದರ್ ಫ್ರೆಂಡ್ಸ್‌ನ ಫಯಾಝ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಮೀಯ್ಯತುಲ್ ಫಲಾಹ್‌ನ ಪ್ರಧಾನ ಕಾರ್ಯದರ್ಶಿ ನಝೀರ್ ಅಹ್ಮದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಖ್ಯಾತ ನೇತ್ರ ತಜ್ಞ ಡಾ. ಜಯರಾಮ್ ಶೆಟ್ಟಿ, ಡಾ.ಎಚ್.ಅಮೀನ್ ನೇತೃತ್ವದ ವೈದ್ಯಕೀಯ ತಂಡ ಸುಮಾರು 200 ಶಿಬಿರಾರ್ಥಿಗಳ ಕಣ್ಣಿನ ತಪಾಸಣೆ ನಡೆಸಿದರು.
ಶಿಬಿರಾರ್ಥಿಗಳಿಗೆ ಉಚಿತ ಔಷಧಿಗಳನ್ನು ನೀಡಲಾಯಿತು. 107 ಜನರಿಗೆ ಉಚಿತ ಕನ್ನಡಕಗಳನ್ನು ಒದಗಿಸಲಾಯಿತು ಹಾಗೂ 22 ಜನರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಯಿತು.