×
Ad

ಮುಡಿಪು: ಝೆನಿತ್ ಶಾಲೆಯಲ್ಲಿ ವಿಜ್ಞಾನ ಮಾದರಿ ಪ್ರದರ್ಶನ

Update: 2020-03-01 21:36 IST

ಮಂಗಳೂರು, ಮಾ.1: ಮುಡಿಪು ಸಮೀಪದ ಝೆನಿತ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳ ಕರಕುಶಲತೆ ಹಾಗೂ ವಿಜ್ಞಾನದ ವಿವಿಧ ಮಾದರಿಗಳ ಪ್ರದರ್ಶನವು ಇತ್ತೀಚೆಗೆ ನಡೆಯಿತು.

ಮಕ್ಕಳು ಆಕರ್ಷಕ ಕರಕುಶಲತೆ ಮತ್ತು ವಿಜ್ಞಾನದ ಮಾದರಿಗಳನ್ನು ತಯಾರಿಸಿ ಕೌಶಲ ಪ್ರದರ್ಶಿಸಿ ಗಮನ ಸೆಳೆದರು. ಇದರೊಂದಿಗೆ ಆಹಾರ ಮೇಳವನ್ನು ಕೂಡ ಶಾಲಾ ವತಿಯಿಂದ ಏರ್ಪಡಿಸಲಾಗಿತ್ತು. ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಹ್ಮಾನ್ ಉದ್ಘಾಟಿಸಿದರು. ಶಾಲಾ ಸಂಚಾಲಕಿ ನಹದ ಮಜೀದ್, ಮುಖ್ಯಶಿಕ್ಷಕಿ ಸಫೂರ ಹಾಗೂ ಶಿಕ್ಷಕ-ರಕ್ಷಕ ಸಂಘದ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News