×
Ad

ಕಿನ್ಯ: ಉಕ್ಕುಡದಲ್ಲಿ ರಕ್ತದಾನ ಶಿಬಿರ

Update: 2020-03-01 22:00 IST

ಮಂಗಳೂರು, ಮಾ.1: ರಿಫಾಯಿಯಾ ಜುಮಾ ಮಸ್ಜಿದ್ ಕಿನ್ಯ ಉಕ್ಕುಡ ಇದರ ವತಿಯಿಂದ ರಕ್ತದಾನ ಶಿಬಿರವು ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆ ಸಹಬಾಗಿತ್ವದಲ್ಲಿ ರವಿವಾರ ಉಕ್ಕುಡ ರಿಫಾಯಿಯ ಮದ್ರಸ ಸಭಾಂಗಣದಲ್ಲಿದಲ್ಲಿ ಜರುಗಿತು.

ಸೈಯದ್ ಬಾತಿಷ್ ತಙಳ್ ಆನೆಕಲ್ಲು ದುಆಗೈದರು. ಅಬೂಬಕರ್ ದಾರಿಮಿ ಕಿರಾಅತ್ ಪಠಿಸಿದರು. ಕಿನ್ಯ ಕೇಂದ್ರ ಮಸೀದಿಯ ಅಧ್ಯಕ್ಷ ಇಸ್ಮಾಯೀಲ್ ಹಾಜಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರಿಫಾಯಿಯಾ ಮಸೀದಿಯ ಉಪಾಧ್ಯಕ್ಷ ಹಸೈನಾರ್ ಹಾಜಿ ಅಧ್ಯಕ್ಷ ವಹಿಸಿದ್ದರು. ಖತೀಬ್ ನಾಸಿರ್ ಅಝ್‌ಹರಿ ರಕ್ತದಾನದ ಮಹತ್ವದ ಬಗ್ಗೆ ಮಾತನಾಡಿದರು. ಅಬೂಸಾಲಿ ಹಾಜಿ ಕುರಿಯಕ್ಕಾರ್ ಶುಭಹಾರೈಸಿದರು.

ಈ ಸಂದರ್ಭ ಜಮಾಅತ್ ಅಧ್ಯಕ್ಷ ಇಬ್ರಾಹಿಂ ಕೆಬಿ, ಉಪಾಧ್ಯಕ್ಷ ಅಬ್ದುಲ್ಲ, ಕೋಶಾಧಿಕಾರಿ ಸಲೀಂ ಉಕ್ಕುಡ, ಕಾರ್ಯದರ್ಶಿ ರಝಾಕ್, ನಾಸಿರ್, ಊರಿನ ಹಿರಿಯರಾದ ಉಸ್ಮಾನ್ ಉಕ್ಕುಡ, ರಿಫಾಯಿಯಾ ಮದ್ರಸದ ಅಧ್ಯಾಪಕ ಇಬ್ರಾಹೀಂ ಮುಸ್ಲಿಯಾರ್, ಸಲೀಂ ಯಮಾನಿ ಉಪಸ್ಥಿತರಿದ್ದರು. ಮಸೀದಿಯ ಪ್ರಧಾನ ಕಾರ್ಯದರ್ಶಿ ಫಾರೂಕ್ ಕಿನ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News