×
Ad

ಯಂಗ್ ಬ್ರಿಗೇಡ್ ಸೇವಾ ದಳ ಪುತ್ತೂರು: ರಕ್ತದಾನದ ಮೂಲಕ ಕ್ರಿಕೆಟ್ ಪಂದ್ಯಾಕೂಟ

Update: 2020-03-01 22:51 IST

ಪುತ್ತೂರು : ಯಂಗ್ ಬ್ರಿಗೇಡ್ ಸೇವಾ ದಳ ಪುತ್ತೂರು ಆಯೋಜಿಸಿರುವ ಪುತ್ತೂರು ತಾಲೂಕಿನ ಅರ್ಹ 32 ತಂಡಗಳ ಆಟಗಾರರನ್ನೊಳಗೊಂಡ ಅಂಡರ್ ಆರ್ಮ್ ಫುಲ್ ಗ್ರೌಂಡ್ ಕ್ರಿಕೆಟ್ ಟೂರ್ನಮೆಂಟ್ 'ಯಂಗ್ ಬ್ರಿಗೇಡ್ ಟ್ರೋಫಿ - 2020’ ಎರಡು ದಿನಗಳ ಕ್ರಿಕೆಟ್ ಪಂದ್ಯಾಕೂಟವು ಪುತ್ತೂರಿನ ಕೊಂಬೆಟ್ಟು ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ರಕ್ತದಾನದ ಮೂಲಕ ಯಶಸ್ವಿಯಾಗಿ ಆರಂಭಗೊಂಡಿತು.

ರಕ್ತದಾನದ ಮೂಲಕ ನಡೆದ ಕ್ರಿಕೆಟ್ ಪಂದ್ಯಾಟದ ಅರ್ಹತಾ ಸುತ್ತಿನಲ್ಲಿ ಭಾಗವಹಿಸಿದ 32 ತಂಡಗಳ ಪರವಾಗಿ ಪ್ರತೀ ತಂಡದ ಕನಿಷ್ಠ 5 ಮಂದಿ ಕ್ರೀಡಾಭಿಮಾನಿಗಳು ರಕ್ತದಾನ ಮಾಡಿ ಕ್ರೀಡೆಯೊಂದಿಗೆ ಸಾಮಾಜಿಕ ಸಹೃದಯತೆಯನ್ನು ತೋರಿದರು.

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಂಸ್ಥೆಯ ಸಹಭಾಗಿತ್ವದಲ್ಲಿ ಕೆ ಎಂ ಸಿ ಆಸ್ಪತ್ರೆ ಮಂಗಳೂರು ಮತ್ತು ಎ ಜೆ ಆಸ್ಪತ್ರೆ ಮಂಗಳೂರು ಹಾಗೂ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಇದರ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರದಲ್ಲಿ 210 ಕ್ರೀಡಾಭಿಮಾನಿಗಳು ರಕ್ತದಾನ ಮಾಡಿ ಸಹಕರಿಸಿದರು.

ಯಂಗ್ ಬ್ರಿಗೇಡ್ ಸಾಲ್ಮರ ಮತ್ತು ಯಂಗ್ ಬ್ರಿಗೇಡ್ ಬನ್ನೂರು ತಂಡವು ಗರಿಷ್ಟ ರಕ್ತದಾನವನ್ನು ಮಾಡಿದ ತಂಡದ ಬಹುಮಾನಕ್ಕೆ ಪಾತ್ರವಾಯಿತು. 

ರಕ್ತದಾನ ಶಿಬಿರದ ಉದ್ಘಾಟನೆಯನ್ನು ಯಂಗ್ ಬ್ರಿಗೇಡ್ ಪುತ್ತೂರು ಅಧ್ಯಕ್ಷ  ರಂಜಿತ್ ಬಂಗೇರ ಸ್ವಯಂ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಯಂಗ್ ಬ್ರಿಗೇಡ್ ವಿಟ್ಲ ಮತ್ತು ಉಪ್ಪಿನಂಗಡಿ ಅಧ್ಯಕ್ಷ ಅಭಿಷೇಕ್ ಬೆಳ್ಳಿಪ್ಪಾಡಿ, ಪುತ್ತೂರು ನಗರಸಭೆ ಸದಸ್ಯರಾದ ಮುಹಮ್ಮದ್ ರಿಯಾಝ್ ಕೆ, ಯಂಗ್ ಬ್ರಿಗೇಡ್ ಪುತ್ತೂರು ಪ್ರಧಾನ ಕಾರ್ಯದರ್ಶಿ ಲೋಕೇಶ್ ಪಡ್ಡಾಯೂರು, ಯಂಗ್ ಬ್ರಿಗೇಡ್ ಪುತ್ತೂರು ಕೋಶಾಧಿಕಾರಿ ಶರೀಫ್ ಬಲ್ನಾಡು, ಯಂಗ್ ಬ್ರಿಗೇಡ್ ಪುತ್ತೂರು ಸಂಘಟನಾ ಕಾರ್ಯದರ್ಶಿಗಳಾದ  ಪ್ರಕಾಶ್ ಪುರುಷರಕಟ್ಟೆ ಮತ್ತು ಮೋನು ಬಪ್ಪಳಿಗೆ ಹಾಗೂ ಸದಸ್ಯರಾದ ಜಯೇಶ್ ಕಾರ್ಜಾಲ್, ನವಾಝ್ ಸಾಲ್ಮರ, ಸಿನಾನ್ ಪರ್ಲಡ್ಕ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಕಾರ್ಯ ನಿರ್ವಾಹಕರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಮತ್ತು ಸೇವಾ ದಳದ ಅಧ್ಯಕ್ಷರಾದ ಜೋಕಿಂ ಡಿ'ಸೋಜಾ ಮಾತನಾಡಿ, ಪಂದ್ಯಾಕೂಟಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಯಂಗ್ ಬ್ರಿಗೇಡ್ ರಾಜ್ಯಾಧ್ಯಕ್ಷ  ಜುನೈದ್ ಪಿ ಕೆ ಮತ್ತು ಯಂಗ್ ಬ್ರಿಗೇಡ್ ಸದಸ್ಯರು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಕಾರ್ಯನಿರ್ವಾಹಕರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News