×
Ad

​ವಳಚ್ಚಿಲ್ ನಲ್ಲಿ ರಕ್ತದಾನ ಶಿಬಿರ

Update: 2020-03-01 22:57 IST

ಮಂಗಳೂರು : ಅರ್ಕುಳ ವಳಚ್ಚಿಲ್ ಜುಮಾ ಮಸೀದಿ ಮತ್ತು ತನ್ವೀರುಲ್ ಇಸ್ಲಾಂ ಮದರಸ ವಳಚ್ಚಿಲ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಜಂಟಿ ಆಶ್ರಯದಲ್ಲಿ ತೇಜಸ್ವಿನಿ ಲಯನ್ಸ್ ಬ್ಲಡ್ ಬ್ಯಾಂಕ್ ಆಸ್ಪತ್ರೆ ಮಂಗಳೂರು ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ರವಿವಾರ ವಳಚ್ಚಿಲ್ ತನ್ವೀರುಲ್ ಇಸ್ಲಾಂ ಮದರಸದಲ್ಲಿ ನಡೆಯಿತು.

ತನ್ವೀರುಲ್ ಇಸ್ಲಾಂ ಮದರಸ ವಲಚ್ಚಿಲ್ ಅಧ್ಯಕ್ಷ ಲತೀಫ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ವಳಚ್ಚಿಲ್ ಜುಮಾ ಮಸೀದಿ ಖತೀಬ್  ಅಬ್ದುಲ್ ಖಾದರ್  ದಾರಿಮಿ ಕುಕ್ಕಿಲ ದುವಾಶಿರ್ವಚನ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಕುಕ್ಕಿಲ ದಾರಿಮಿಯವರು, ತುರ್ತು ಸಂದರ್ಭದಲ್ಲಿ ಹಾಗೂ ರಕ್ತದಾನ ಶಿಬಿರಗಳ ಮೂಲಕ ರೋಗಿಗಳ ಪಾಲಿಗೆ ಆಶಾಕಿರಣವಾಗಿ ಕರ್ನಾಟಕದ ಮೂಲೆ ಮೂಲೆಗಳಲ್ಲಿ ನಿಸ್ವಾರ್ಥವಾಗಿ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿರುವ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.

ವೇದಿಕೆಯಲ್ಲಿ ಯಾಸೀನ್ ಆತಳೆ, ಸಮೀರ್  ಶಾನ್, ಖುಬೃದ್, ಅಬ್ಬಾಸ್,ಅನ್ವರ್ ತಬೂಕ್, ನಝೀರ್, ನಝೀರ್ ತೋಟ, ಮುಸ್ತಫ, ರಝಾಕ್ ರಿಕ್ಷಾ ಪಾರ್ಕ್, ಮನ್ಸೂರ್, ಸಮದ್, ಆಸಿಫ್, ಶರೀಫ್ , ಕಮರುದ್ದೀನ್ ಕೊಲಂಬೆ, ಪುತ್ತುಬಾವ ಆತಲೆ, ಫೈಝಲ್ ವಿ.ಎಚ್, ಯಾಕೂಬ್ ಫೈರೋಝ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಕಾರ್ಯ ನಿರ್ವಾಹಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News