×
Ad

ತಾಲಿಬಾನ್ ಒಪ್ಪಂದಕ್ಕೆ ಬದ್ಧವಾಗದಿದ್ದರೆ ನಾವು ಹಿಂದೆ ಸರಿಯುತ್ತೇವೆ: ಟ್ರಂಪ್ ಎಚ್ಚರಿಕೆ

Update: 2020-03-01 23:46 IST

ವಾಶಿಂಗ್ಟನ್, ಮಾ. 1: ಅಮೆರಿಕ ಮತ್ತು ತಾಲಿಬಾನ್ ನಡುವೆ ಏರ್ಪಟ್ಟಿರುವ ಶಾಂತಿ ಒಪ್ಪಂದವು, ಅತ್ಯಂತ ದೀರ್ಘ ಯುದ್ಧವೊಂದರ ಅಂತ್ಯದ ಆರಂಭವಾಗಿರುತ್ತದೆ ಎಂದು ಅಮೆರಿಕ ಭಾವಿಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ.

ಶಾಂತಿ ಒಪ್ಪಂದಕ್ಕೆ ಅಮೆರಿಕ ಮತ್ತು ತಾಲಿಬಾನ್ ಸಹಿ ಹಾಕಿದ ಬಳಿಕ ಟ್ರಂಪ್ ಈ ಪ್ರತಿಕ್ರಿಯೆ ನೀಡಿದ್ದಾರೆ.

ಶಾಂತಿಗೆ ತಾಲಿಬಾನ್ ಸಿದ್ಧವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ ಟ್ರಂಪ್, ಆದರೆ ಒಪ್ಪಂದದ ಪ್ರಕಾರ ತಾಲಿಬಾನ್ ನಡೆಯದಿದ್ದರೆ ನಾವು ಒಪ್ಪಂದದಿಂದ ಹಿಂದೆ ಸರಿಯುತ್ತೇವೆ ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News