×
Ad

ಜಪಾನ್: ಹಡಗುಗಳ ನಡುವೆ ಢಿಕ್ಕಿ; 13 ನಾವಿಕರು ನಾಪತ್ತೆ

Update: 2020-03-01 23:54 IST

ಟೋಕಿಯೊ (ಜಪಾನ್), ಮಾ. 1: ಉತ್ತರ ಜಪಾನ್ ಕರಾವಳಿಯಲ್ಲಿ ಸರಕು ಸಾಗಣೆ ಹಡಗೊಂದು ಮೀನುಗಾರಿಕಾ ದೋಣಿಯೊಂದಕ್ಕೆ ಢಿಕ್ಕಿಯಾದ ಬಳಿಕ ಸರಕು ಹಡಗಿನ ಹತ್ತಕ್ಕೂ ಅಧಿಕ ನಾವಿಕರು ನಾಪತ್ತೆಯಾಗಿದ್ದಾರೆ ಎಂದು ಜಪಾನ್ ತಟರಕ್ಷಣ ಪಡೆಯ ಅಧಿಕಾರಿಯೊಬ್ಬರು ರವಿವಾರ ತಿಳಿಸಿದ್ದಾರೆ.

1989 ಟನ್ ತೂಕದ ಸರಕು ಹಡಗು ಮತ್ತು 138 ಟನ್ ತೂಕದ ಜಪಾನಿ ಮೀನುಗಾರಿಕಾ ಹಡಗಿನ ನಡುವೆ ಸ್ಥಳೀಯ ಸಮಯ ರಾತ್ರಿ 10.30 ಗಂಟೆಗೆ ಢಿಕ್ಕಿ ಸಂಭವಿಸಿತು.

ಸರಕು ಹಡಗಿನಲ್ಲಿ 14 ಸಿಬ್ಬಂದಿಯಿದ್ದು, 13 ಮಂದಿ ನಾಪತ್ತೆಯಾಗಿದ್ದಾರೆ. ಓರ್ವನನ್ನು ರಕ್ಷಿಸಲಾಗಿದೆ. ಅದೇ ವೇಳೆ, ಜಪಾನ್ ಮೀನುಗಾರಿಕಾ ಹಡಗಿನಲ್ಲಿದ್ದ ಎಲ್ಲ 15 ಮಂದಿ ಸುರಕ್ಷಿತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News