ಬಂಧನ ಕೇಂದ್ರಗಳಲ್ಲಿರುವ ಉಯಿಘರ್ ಮುಸ್ಲಿಮರನ್ನು ಫ್ಯಾಕ್ಟರಿಗಳಲ್ಲಿ ಬಲವಂತದಿಂದ ದುಡಿಸುತ್ತಿರುವ ಚೀನಾ

Update: 2020-03-02 13:35 GMT

ಸಿಡ್ನಿ: ಚೀನಾ ಸರಕಾರವು ದೇಶದಲ್ಲಿನ ಉಯಿಘರ್ ಮುಸ್ಲಿಮರ ದಿಗ್ಬಂಧನ ಕೇಂದ್ರಗಳಿಂದ ಸಾವಿರಾರು ಉಯಿಘರ್ ಮುಸ್ಲಿಮರನ್ನು ಹೊರತಂದು ಜಗತ್ತಿನ ಖ್ಯಾತ ಬ್ರಾಂಡ್ ಗಳನ್ನು ಉತ್ಪಾದಿಸುವ ಕಂಪೆನಿಗಳಲ್ಲಿ ಅವರಿಂದ ಬಲವಂತದಿಂದ ಕೆಲಸ ಮಾಡಿಸುತ್ತಿದೆ ಎಂದು ಆಸ್ಟ್ರೇಲಿಯನ್ ಸ್ಟ್ರೆಟಜಿಕ್ ಪಾಲಿಸಿ ಇನ್‍ ಸ್ಟಿಟ್ಯೂಟ್ ಆರೋಪಿಸಿದೆ.

ಖ್ಯಾತ ಕಂಪೆನಿಗಳಾದ ಆ್ಯಪಲ್, ಬಿಎಂಡಬ್ಲ್ಯು, ವಾವೆ, ನೈಕ್, ಸ್ಯಾಮ್ಸಂಗ್, ಫೋಕ್ಸ್ ವ್ಯಾಗನ್  ಹಾಗೂ ಸೋನಿ ಇಂತಹ ಕಾರ್ಮಿಕರಿಂದ ಬಲವಂತದಿಂದ ದುಡಿಸಿ ತಯಾರಿಸಲ್ಪಟ್ಟ ಉತ್ಪನ್ನಗಳನ್ನು ಬಳಸುತ್ತಿರುವ ಆರೋಪ ಈಗ ಎದುರಿಸುವಂತಾಗಿದ್ದು ಇದು ಜಾಗತಿಕವಾಗಿ ದೊಡ್ಡ ಮಟ್ಟದ ವಿವಾದಕ್ಕೀಡಾಗುವ ಸಾಧ್ಯತೆಯಿದೆ.

ಆಸ್ಟ್ರೇಲಿಯಾದ ಸಂಸ್ಥೆಯ ಪ್ರಕಾರ ಚೀನಾದ ಸರಕಾರ ಈಗಾಗಲೇ 80,000ಕ್ಕೂ ಅಧಿಕ ಉಯಿಘರ್ ಮುಸ್ಲಿಮರನ್ನು ಕ್ಸಿನ್ಜಿಯಾಂಗ್ ದಿಗ್ಬಂಧನ ಶಿಬಿರಗಳಿಂದ ಹೊರತಂದು ದೇಶದಲ್ಲಿನ ಕನಿಷ್ಠ 83 ಖ್ಯಾತ ಬ್ರ್ಯಾಂಡುಗಳಿಗೆ ಉತ್ಪನ್ನಗಳನ್ನು ತಯಾರಿಸುವ ಫ್ಯಾಕ್ಟರಿಗಳಲ್ಲಿ ಅವರನ್ನು ದುಡಿಸುತ್ತಿದೆ.

ಈ ಸಂಸ್ಥೆಗಳು ತಕ್ಷಣ  ಚೀನಾದಲ್ಲಿರುವ ತಮ್ಮ ಫ್ಯಾಕ್ಟರಿಗಳ ಕಾರ್ಮಿಕರ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದೂ ಸಂಸ್ಥೆ ಹೇಳಿದೆ. ಚೀನಾದಲ್ಲಿ ಸುಮಾರು 10 ಲಕ್ಷ ಉಯಿಘರ್ ಮುಸ್ಲಿಮರನ್ನು ದಿಗ್ಬಂಧನ ಶಿಬಿರಗಳಲ್ಲಿರಿಸಲಾಗಿದೆ ಎಂಬ ಮಾಹಿತಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News