×
Ad

ಹಿರಿಯಡಕ ಕಾಲೇಜು ವಿದ್ಯಾರ್ಥಿಗಳಿಂದ ಚಾರಣ ಶಿಬಿರ

Update: 2020-03-02 20:20 IST

ಉಡುಪಿ, ಮಾ.2: ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ಸ್‌ ಮತ್ತು ರೇಂಜರ್ಸ್‌ ಘಟಕದ ವತಿಯಿಂದ ಮೂರು ದಿನಗಳ ಚಾರಣ ಶಿಬಿರವನ್ನು ಕೊಡಚಾದ್ರಿ ತಪ್ಪಲಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಚಾರಣ ಶಿಬಿರದ ನೇತೃತ್ವವನ್ನು ಕಾಲೇಜಿನ ರೋವರ್ಸ್‌ ಘಟಕದ ಸಂಚಾಲಕ ಅನಿಲ್‌ಕುಮಾರ್ ಹಾಗೂ ರೇಂಜರ್ಸ್‌ ಘಟಕದ ಸಂಚಾಲಕಿ ಸವಿತಾ ವಹಿಸಿದ್ದರು. ಈ ಚಾರಣ ಶಿಬಿರದಲ್ಲಿ ಕಾಲೇಜಿನ ರೋವರ್ಸ್‌ ಮತ್ತು ರೇಂಜರ್ಸ್‌ ಘಟಕದ 18 ರೋವರ್ಸ್‌ ಮ್ತು 14 ರೇಂಜರ್ಸ್‌ ಭಾಗವಹಿಸಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ನಿಕೇತನ ಚಾರಣಕ್ಕೆ ಶುಭಹಾ ರೈಸಿದರು. ಶಿಬಿರಾರ್ಥಿಗಳು ಚಾರಣದ ಸಂದರ್ಭದಲ್ಲಿ ಅತಿ ಎತ್ತರದ ಕೊಡಚಾದ್ರಿ ಬೆಟ್ಟವನ್ನು ಹತ್ತಿದರು. ಬೆಟ್ಟವನ್ನು ಹತ್ತುವಾಗ ದಾರಿಯ ಇಕ್ಕೆಲಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲ್ ಹಾಗೂ ಪ್ಲಾಸ್ಟಿಕ್ ಕವರ್‌ಗಳನ್ನು ಆಯ್ದು ಸ್ವಚ್ಛಗೊಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ನಿಕೇತನ ಚಾರಣಕ್ಕೆ ಶುಹಾರೈಸಿದರು.

ನಂತರ ಶಿಬಿರಾರ್ಥಿಗಳು ಸಮೀಪದ ಸೋಮೇಶ್ವರ ಬೀಚಿಗೆ ತೆರಳಿ ಸ್ವಚ್ಚತಾ ಕಾರ್ಯದ ರಾಯಭಾರಿಗಳಾಗಿ ಸ್ಥಳೀಯರಿಗೆ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಿ ದರು. ನಂತರ ಶಿಬಿರಾರ್ಥಿಗಳು ಮತ್ತು ಸ್ಥಳೀಯರು ಶಿಬಿರಾಗ್ನಿಯಲ್ಲಿ ಪಾಲ್ಗೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News