ರೆಡ್‌ಕ್ರಾಸ್‌ನಿಂದ ಉಚಿತ ಗ್ರಾಮೀಣ ವೈದ್ಯಕೀಯ ತಪಾಸಣಾ ಶಿಬಿರ
ಉಡುಪಿ, ಮಾ.2: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಘಟಕ, ಶ್ರೀಮತಿ ರುಕ್ಮಿಣಿ ಶೆಡ್ತಿ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ, ಸಮಾಜ ಕಾರ್ಯ ವಿಭಾಗ ಹಾಗೂ ರೋಟರಿ ಕ್ಲಬ್ ಬಾರಕೂರು ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಗ್ರಾಮೀಣ ವೈದ್ಯಕೀಯ ತಪಾಸಣಾ ಶಿಬಿರ ಇತ್ತೀಚೆಗೆ ಕೋಟಂಬೈಲಿನ ಸರಕಾರಿ ಹಿರಿು ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಶಿಬಿರವನ್ನು ಭಾರತೀಯ ರೆಡ್‌ಕ್ರಾಸ್‌ನ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಉದ್ಘಾಟಿಸಿದರು. ಗ್ರಾಮೀಣ ಪ್ರದೇಶದ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸದೆ ಇರುವುದರಿಂದ ಕಾಯಿಲೆಗಳಿಗೆ ಬೇಗ ತುತ್ತಾಗುತ್ತಾರೆ. ಹೀಗಾಗಿ ವರ್ಷ ಕ್ಕೊಮ್ಮೆಯಾದರೂ ಗ್ರಾಮೀಣ ಜನರು ತಮ್ಮನ್ನು ದೈಹಿಕ ಪರೀಕ್ಷೆ ಗೊಳಪಡಿಸಿೊಳ್ಳಬೇಕಾದ ಅಗತ್ಯವಿದೆ ಎಂದರು.
ಈ ನಿಟ್ಟಿನಲ್ಲಿ ಶ್ರೀಮತಿ ರುಕ್ಮಿಣಿ ಶೆಡ್ತಿ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ಯುವ ರೆಡ್‌ಕ್ರಾಸ್ ಘಟಕದ ಸ್ವಯಂಸೇವಕ ರೊಂದಿಗೆ 5 ದಿನಗಳ ವಸತಿ ಶಿಬಿರ ಹಮ್ಮಿಕೊಂಡು ಗ್ರಾಮದಲ್ಲಿರುವ 186 ಮನೆಗಳಿಗೂ ಭೇಟಿ ನೀಡಿ ಅವರ ಜೀವನ ಶೈಲಿ, ಬೆಳೆಯುವ ಕೃಷಿ, ತೋಟಗಾರಿಕೆ ಮತ್ತು ಆಹಾರ ಪದ್ಧತಿ, ವಿದ್ಯಾಭ್ಯಾಸದ ಕುರಿತು ಸಮಗ್ರ ಮಾಹಿತಿ ಕಲೆ ಹಾಕಲಿದ್ದಾರೆ. ಇದರೊಂದಿಗೆ ಶ್ರಮದಾನದ ಮೂಲಕ ರಸ್ತೆ, ಕೆರೆ, ಚರಂಡಿ ಯನ್ನು ಸ್ವಚ್ಚಗೊಳಿಸಲಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ವಸಂತರಾಜ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ, ಡಾ. ಧನಂಜಯ, ರೋಟರಿ ಕ್ಲಬ್ ಬಾರಕೂರಿನ ಅಧ್ಯಕ್ಷ ಬಿ. ಸುಧಾಕರ ರಾವ್, ಜಿಪಂ ಸದಸ್ಯ ಸುಧಾಕರ ಶೆಟ್ಟಿ, ಗ್ರಾಪಂ ಸದಸ್ಯೆ ಪ್ರತಿಮಾ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಮಧುಮೇಹ ತಪಾಸಣೆ, ರಕ್ತದೊತ್ತಡ ತಪಾಸಣೆ, ದೃಷ್ಟಿ ತಪಾಸಣೆ, ಫಿಸಿಯೋಥೆರಪಿ, ಶ್ರವಣ ಪರೀಕ್ಷೆ ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು. ಗ್ರಾಮದ 200ಕ್ಕೂ ಹೆಚ್ಚು ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಂಡರು.