×
Ad

ಮಾ.3: ಗೇರುಬೀಜ ಸಂಸ್ಕರಣೆ, ರಫ್ತುದಾರರ ಸಮ್ಮೇಳನ

Update: 2020-03-02 20:38 IST

ಉಡುಪಿ, ಮಾ.2: ಸಿಂಡಿಕೇಟ್ ಬ್ಯಾಂಕ್ ವತಿಯಿಂದ ಗೇರುಬೀಜ ಸಂಸ್ಕರಣೆ ಹಾಗೂ ರಪ್ತುದಾರರ ವಾರ್ಷಿಕ ಸಮ್ಮೇಳನ ಮಾ.3 ಮಂಗಳವಾರ ಸಂಜೆ 5 ಗಂಟೆಗೆ ಮಣಿಪಾಲದ ಹೋಟೆಲ್ ವುಧುವನ ಸರಾಯ್‌ನಲ್ಲಿ ನಡೆಯಲಿದೆ.

ಸಣ್ಣ, ಅತೀ ಸಣ್ಣ ಹಾಗೂ ಮಧ್ಯಮ ಗೇರು ಬೀಜ ಸಂಸ್ಕರಣೆ ಉದ್ಯಮವನ್ನು ಪ್ರೋತ್ಸಾಹಿಸಲು ಪ್ರತಿ ವರ್ಷದಂತೆ ಈ ವರ್ಷವು ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಸಮ್ಮೇಳನದಲ್ಲಿ ಮಂಗಳೂರು, ಉಡುಪಿ, ಕಾರವಾರ ಹಾಗೂ ಬೆಳಗಾವಿ ಜಿಲ್ಲೆಗಳ ಗೇರುಬೀಜ ಸಂಸ್ಕರಣ ಹಾಗೂ ರಪ್ತುದಾರರು ಭಾಗವಹಿಸಲಿದ್ದಾರೆ. ಗೇರುಬೀಜ ಉತ್ಪಾದನೆ, ಆಮದು ಹಾಗೂ ರಫ್ತಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.

ಗೇರುಬೀಜ ಸಂಸ್ಕರಣೆ ಹಾಗೂ ರಫ್ತುದಾರರ ಸಮ್ಮೇಳನದಲ್ಲಿ ಗ್ರಾಹಕರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಿಂಡಿಕೇಟ್ ಬ್ಯಾಂಕ್ ವಲಯ ಕಛೇರಿ ಮಣಿಪಾಲದ ಮಹಾಪ್ರಬಂಧಕ ಭಾಸ್ಕರ ಹಂದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News