×
Ad

ಮಣಿಪಾಲ: ಮಾ.3ರಂದು ಗ್ರಾಮೀಣ ಕೃಷಿ ವಿಸ್ತರಣಾ ಕಾರ್ಯಕ್ರಮ

Update: 2020-03-02 20:43 IST

ಉಡುಪಿ, ಮಾ.2: ಸಿಂಡಿಕೇಟ್‌ಬ್ಯಾಂಕ್ ವತಿಯಿಂದ ಗ್ರಾಮೀಣ ಕೃಷಿ ವಿಸ್ತರಣಾ ಕಾರ್ಯಕ್ರಮ ಮಾ.3ರ  ಬೆಳಗ್ಗೆ 10  ಗಂಟೆಗೆ ಮಣಿಪಾಲದ ಸಿಂಡಿಕೇಟ್‌ಬ್ಯಾಂಕ್ ಗೋಲ್ಡನ್ ಜ್ಯುಬಿಲಿ ಸಭಾಂಗಣದಲ್ಲಿ ನಡೆಯಲಿದೆ.

ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನ, ಸುಧಾರಿತ ಬೇಸಾಯ ಪದ್ಧತಿ, ಸುಧಾರಿತ ತಳಿಗಳು, ಬೆಳೆ ಸಂರಕ್ಷಣೆ, ಮಣ್ಣು ಸಂರಕ್ಷಣೆ, ಕೃಷಿಯಲ್ಲಿ ನೂತನ ಆವಿಷ್ಕಾರಗಳು ಇತ್ಯಾದಿ ವಿಷಯಗಳ ಬಗ್ಗೆ ತಜ್ಞರಿಂದ ಮಾಹಿತಿ ನೀಡಲಾಗುವುದು. ಸಣ್ಣ ಹಾಗೂ ಅತೀ ಸಣ್ಣಉದ್ಯಮದಾರರಿಗೆ ಸರ್ಕಾರದಿಂದ ಲ್ಯವಿರುವ ಪ್ರೋತ್ಸಾಹ ಹಾಗೂ ವಿವಿಧ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಒದಗಿಸಲಾಗುವುದು.

ಕೃಷಿ ಪರಿಕರಗಳ ಪ್ರಾತ್ಯಕ್ಷಿಕತೆ, ಬ್ಯಾಂಕಿನಿಂದ ಸಿಗುವ ಕೃಷಿ ಹಾಗೂ ಎಂಎಸ್‌ಎಂಇ ಸಾಲ ಸೌಲ್ಯಗಳು, ನಗದು ರಹಿತ ವ್ಯವಹಾರ, ಡಿಜಿಟಲ್ ಬ್ಯಾಂಕಿಂಗ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಹ ಇಲ್ಲಿ ನೀಡಲಾಗುತ್ತದೆ.

ಗ್ರಾಮೀಣ ಕೃಷಿ ವಿಸ್ತರಣಾ ಕಾರ್ಯಕ್ರಮದಲ್ಲಿ ರೈತರು ಹಾಗೂ ಉದ್ದಿಮೆ ದಾರರು ಭಾಗವಹಿಸಿ ಇದರ ಸದುಪಯೋಗ ಪಡೆದು ಕೊಳ್ಳುವಂತೆ ಸಿಂಡಿಕೇಟ್ ಬ್ಯಾಂಕ್ ವಲಯ ಕಛೇರಿ ಮಣಿಪಾಲದ ಮಹಾ ಪ್ರಬಂಧಕ ಭಾಸ್ಕರ್ ಹಂದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News