×
Ad

ಸಮನ್ವಯ ಶಿಕ್ಷಕರ ಹುದ್ದೆಗೆ ನೇರ ಗುತ್ತಿಗೆಯಡಿಯಲ್ಲಿ ನೇಮಕಾತಿ

Update: 2020-03-02 20:45 IST

ಉಡುಪಿ, ಮಾ.2: ಜಿಲ್ಲೆಯ ಬೈಂದೂರು, ಕುಂದಾಪುರ, ಕಾರ್ಕಳ, ಬ್ರಹ್ಮಾವರ ಶೈಕ್ಷಣಿಕ ವಲಯಗಳಲ್ಲಿ ತಲಾ 2ರಂತೆ ಪ್ರೌಢಶಾಲಾ ಗ್ರೇಡ್ 2 ಶ್ರೇಣಿಯ ಮತ್ತು ಉಡುಪಿ ವಲಯದಲ್ಲಿ 1 ಹುದ್ದೆ ಒಟ್ಟು 9 ಹುದ್ದೆಗಳು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಶ್ರೇಣಿಯ ತಲಾ 1ರಂತೆ ಬೈಂದೂರು ಮತ್ತು ಉಡುಪಿ ಶೈಕ್ಷಣಿಕ ವಲಯಗಳಲ್ಲಿ ಒಟ್ಟು 2 ಹುದ್ದೆಗಳನ್ನು ಬಾಹ್ಯ ಸಂಪನ್ಮೂಲದಿಂದ ನೇರಗುತ್ತಿಗೆ ಆಧಾರದಲ್ಲಿ ವಿಶೇಷ ಸಂಪನ್ಮೂಲ ಶಿಕ್ಷಕ (ಬಿಐಇಆರ್‌ಟಿ)ರ ನೇಮಕಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪ್ರೌಢಶಾಲಾ ವಿಭಾಗಕ್ಕೆ ರೆಗ್ಯುಲರ್ ಬಿ.ಇಡಿ ಜೊತೆಗೆ ವಿಶೇಷ ಬಿ.ಇಡಿ ಹಾಗೂ ಪ್ರಾಥಮಿಕ ವಿಭಾಗಕ್ಕೆ ವಿಶೇಷ ಡಿ.ಇಡಿ ತರಬೇತಿ ಪಡೆದ ಶಿಕ್ಷಕರು ಆರ್‌ಸಿಐ ನೋಂದಣಿ ಮಾಡಿದವರು, ಮಾರ್ಚ್ 5ರ ಅಪರಾಹ್ನ 1:30ರ ಒಳಗೆ ಪೂರ್ಣ ವಿವರಗಳು ಹಾಗೂ ದಾಖಲೆಗಳೊಂದಿಗೆ ತಮ್ಮ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಲಿಖಿತ ಅರ್ಜಿಯನ್ನು ಸಲ್ಲಿಸುವಂತೆ ಜಿಲ್ಲಾ ಸಮಗ್ರ ಶಿಕ್ಷಣ ಅಭಿಯಾನ ಸಾ. ಶಿ. ಇಲಾಖೆಯ ಉಪನಿರ್ದೇಶಕರು (ಆಡಳಿತ) ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾ ಧಿಕಾಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News