×
Ad

ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಠರಾಗಿ ಡಾ.ಚೂಂತಾರು ಪುನರಾಯ್ಕೆ

Update: 2020-03-02 21:01 IST

ಮಂಗಳೂರು, ಮಾ.2: ದ.ಕ. ಜಿಲ್ಲಾ ಗೃಹರಕ್ಷಕದ ದಳದ ಸಮಾದೇಷ್ಠರಾಗಿ ಡಾ.ಮುರಲೀ ಮೋಹನ್ ಚೂಂತಾರು ಎರಡನೇ ಅವಧಿಗೆ ಮರು ಆಯ್ಕೆಯಾಗಿದ್ದಾರೆ.

ಡಾ.ಚೂಂತಾರು ಅವರನ್ನು ಎರಡನೇ ಅವಧಿಗೆ ಜ.6ರಿಂದ ಮುಂದಿನ 5 ವರ್ಷಗಳ ಕಾಲ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಠರಾಗಿ ನೇಮಕ ಮಾಡಿ ಅಧಿಸೂಚನೆ ಹೊರಡಿಸಿದೆ.

ಡಾ.ಮುರಲೀ ಮೋಹನ್ ಚೂಂತಾರು ಅವರು ನಗರದ ಬಿಜೈ ಸಮೀಪದ ಕಾಪಿಕಾಡು ನಿವಾಸಿಯಾಗಿದ್ದು, ವೃತ್ತಿಯಲ್ಲಿ ಬಾಯಿ, ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News