ಅಮೆರಿಕದಲ್ಲಿ 2ನೇ ಕೊರೋನವೈರಸ್ ಸಾವು
Update: 2020-03-02 21:38 IST
ವಾಶಿಂಗ್ಟನ್, ಮಾ. 2: ಮಾರಕ ಕೊರೋನವೈರಸ್ ಸೋಂಕಿನಿಂದಾಗಿ ಅಮೆರಿಕದಲ್ಲಿ ಎರಡನೇ ಸಾವು ಸಂಭವಿಸಿದೆ ಎಂದು ಆರೋಗ್ಯ ಅಧಿಕಾರಿಗಳು ರವಿವಾರ ಪ್ರಕಟಿಸಿದ್ದಾರೆ.
ಶನಿವಾರ ಮೃತಪಟ್ಟ ವ್ಯಕ್ತಿಗೆ 70 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿತ್ತು ಎಂದು ವಾಶಿಂಗ್ಟನ್ ರಾಜ್ಯದ ಕಿಂಗ್ ಕೌಂಟಿಯ ಸಾರ್ವಜನಿಕ ಆರೋಗ್ಯ ಕಚೇರಿ ತಿಳಿಸಿದೆ. ರಾಜ್ಯದ ಅತಿ ನಿಬಿಡ ಜನಸಂಖ್ಯೆ ಹೊಂದಿರುವ ಕಿಂಗ್ ಕೌಂಟಿಯಲ್ಲಿ ಸಾವು ಸಂಭವಿಸಿದೆ.