ಅಜ್ಞಾತ ವಲಯದಲ್ಲಿ ಕೊರೋನವೈರಸ್ ವಿರುದ್ಧದ ಹೋರಾಟ: ವಿಶ್ವಸಂಸ್ಥೆ

Update: 2020-03-03 17:09 GMT
Photo: Facebook/World Health Organization (WHO)

ಬೀಜಿಂಗ್ (ಚೀನಾ), ಮಾ. 3: ಮಾರಕ ನೂತನ-ಕೊರೋನವೈರಸ್ ವಿರುದ್ಧದ ಹೋರಾಟದಲ್ಲಿ ಜಗತ್ತು ಅಜ್ಞಾತ ವಲಯವನ್ನು ಪ್ರವೇಶಿಸಿದೆ ಎಂದು ವಿಶ್ವಸಂಸ್ಥೆಯ ಆರೋಗ್ಯ ಘಟಕವಾಗಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಸೋಮವಾರ ಎಚ್ಚರಿಸಿದೆ.

 ಚೀನಾದಲ್ಲಿ ಹೊಸ ಸೋಂಕು ಪ್ರಕರಣಗಳು ಇಳಿಮುಖವಾಗಿರುವ, ಆದರೆ ವಿದೇಶಗಳಲ್ಲಿ ಅಗಾಧ ಪ್ರಮಾಣದಲ್ಲಿ ಹೆಚ್ಚಿರುವ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಈ ಎಚ್ಚರಿಕೆ ನೀಡಿದೆ.

ಚೀನಾವನ್ನು ಹೊರತುಪಡಿಸಿ ದಕ್ಷಿಣ ಕೊರಿಯ, ಇರಾನ್ ಮತ್ತು ಇಟಲಿಗಳು ಕೋವಿಡ್-19 ವೈರಸ್‌ನ ಪ್ರಮುಖ ಕೇಂದ್ರಗಳಾಗಿ ಹೊರಹೊಮ್ಮಿವೆ.

‘‘ಕೊರೋನವೈರಸ್ ವಿರುದ್ಧದ ಹೋರಾಟದಲ್ಲಿ ನಾವೀಗ ಈವರೆಗೆ ಗೊತ್ತಿರದ ಅಜ್ಞಾತ ಭೂಭಾಗದಲ್ಲಿದ್ದೇವೆ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅದನಾಮ್ ಗೆಬ್ರಿಯೇಸಸ್ ಸೋಮವಾರ ಹೇಳಿದರು.

‘‘ಒಂದು ಸಮುದಾಯವನ್ನೇ ಸೋಂಕಿಗೆ ಒಳಪಡಿಸುವ ಸಾಮರ್ಥ್ಯವುಳ್ಳ, ಆದರೆ ಸರಿಯಾದ ಕ್ರಮಗಳ ಮೂಲಕ ನಿಯಂತ್ರಿಸಬಹುದಾದ ವೈರಸನ್ನು ನಾವು ಹಿಂದೆಂದೂ ನೋಡಿಲ್ಲ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News