ಮಾ.25: ಜಲೀಲ್-ನೌಶೀನ್ ಸ್ಮರಣಾರ್ಥ ರಕ್ತದಾನ ಶಿಬಿರ
Update: 2020-03-04 17:42 IST
ಮಂಗಳೂರು, ಮಾ. 4: ಕಳೆದ ವರ್ಷದ ಡಿ.19ರಂದು ಮಂಗಳೂರಿನಲ್ಲಿ ನಡೆದ ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟ ಬಂದರ್ ಕಂದಕ್‌ನ ಜಲೀಲ್ ಹಾಗೂ ಕುದ್ರೋಳಿಯ ನೌಶೀನ್‌ರ ಸ್ಮರಣಾರ್ಥ ಮಾ.25ರಂದು ಕಂದಕ್‌ನಲ್ಲಿ ರಕ್ತದಾನ ಶಿಬಿರ ನಡೆಯಲಿದೆ.
ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ದ.ಕ.ಜಿಲ್ಲೆ ಇದರ ಸಹಯೋಗದಲ್ಲಿ ದಿ ವಾಯ್ಸಾ ಆಫ್ ಬ್ಲಡ್ ಡೋನರ್ಸ್ (ರಿ) ಈ ರಕ್ತದಾನ ಶಿಬಿರ ಆಯೋಜಿಸಿದ್ದು, ವಿದ್ವಾಂಸ ಇರ್ಷಾದ್ ಹುಸೈನ್ ದಾರಿಮಿ ಅಲ್ ಅಝ್‌ಹರಿ ದುಆ ಆಶೀರ್ವಚನ ನೀಡುವರು ಎಂದು ಪ್ರಕಟನೆ ತಿಳಿಸಿದೆ.