ನ್ಯೂ ಶಮ್ಸ್ ಸ್ಕೂಲ್ ವಿದ್ಯಾರ್ಥಿಗಳಿಂದ ಲಕ್ಕಿ ನೂಡಲ್ಸ್ ಫ್ಯಾಕ್ಟರಿಗೆ ಭೇಟಿ
Update: 2020-03-04 19:01 IST
ಭಟ್ಕಳ: ಇಲ್ಲಿನ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಸ್ಕೂಲ್ ವಿದ್ಯಾರ್ಥಿಗಳು ಗುಳ್ಮಿ ರೇಲ್ವೆ ಸ್ಟೇಷನ್ ಕ್ರಾಸ್ ನಲ್ಲಿರುವ ಲಕ್ಕಿ ನೂಡಲ್ಸ್ ಫ್ಯಾಕ್ಟರಿಗೆ ಭೇಟಿ ನೀಡುವುದರ ಮೂಲಕ ಗಮನ ಸೆಳೆದರು.
ವಿದ್ಯಾರ್ಥಿಗಳನ್ನು ಕ್ರೀಯಾಶೀಲರನ್ನಾಗಿ ರೂಪಿಸಲು ಪ್ರತಿ ತಿಂಗಳು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅದರ ಭಾಗವಾಗಿ ಸಣ್ಣಕೈಗಾರಿಕೆಗಳ ಕುರಿತಂತೆ ಮಾಹಿತಿಯನ್ನು ಸಂಗ್ರಹಿಸಲು ಹಾಗೂ ಅವರನ್ನು ಭವಿಷ್ಯದ ಕೈಗಾರಿಕೋಧ್ಯಮಿಗಳನ್ನಾಗಿ ರೂಪಿಸಲು ಇದೊಂದು ಅವಕಾಶವಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.