ಎ.1 ರಿಂದ ಈ 10 ಸರಕಾರಿ ಬ್ಯಾಂಕ್ ಗಳು 4 ಬ್ಯಾಂಕ್ ಗಳಾಗಿ ವಿಲೀನ

Update: 2020-03-04 18:08 GMT

ಹೊಸದಿಲ್ಲಿ,ಮಾ.4: ದೇಶದಲ್ಲಿಯ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಗೊಳಿಸಲು 10 ಸರಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ನಾಲ್ಕು ದೊಡ್ಡ ಬ್ಯಾಂಕುಗಳನ್ನಾಗಿ ವಿಲೀನಗೊಳಿಸುವ ಪ್ರಸ್ತಾವಕ್ಕೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟದ ಸಭೆಯು ಒಪ್ಪಿಗೆ ನೀಡಿದೆ. ವಿಲೀನವು 2020,ಎ.1ರಿಂದ ಜಾರಿಗೆ ಬರಲಿದೆ.

ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ವರ್ಷದ ಆಗಸ್ಟ್‌ನಲ್ಲಿ ಈ ಮಹಾವಿಲೀನದ ಬಗ್ಗೆ ಪ್ರಕಟಿಸಿದ್ದರು. ಈ ವಿಲೀನದ ಬಳಿಕ ಸರಕಾರಿ ಸ್ವಾಮ್ಯದ ಬ್ಯಾಂಕುಗಳ ಸಂಖ್ಯೆ 12ಕ್ಕೆ ಇಳಿಯಲಿದೆ.

ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾಗಳು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ,ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕ್‌ನಲ್ಲಿ,ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್‌ಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಾಗೂ ಅಲಹಾಬಾದ್ ಬ್ಯಾಂಕ್ ಇಂಡಿಯನ್ ಬ್ಯಾಂಕ್‌ನಲ್ಲಿ ಲೀನಗೊಳ್ಳಲಿವೆ. ಈ ಮಹಾವಿಲೀನದ ಬಳಿಕ ಇವು ಅನುಕ್ರಮವಾಗಿ ಎರಡು,ನಾಲ್ಕು,ಐದು ಮತ್ತು ಏಳನೇ ಅತ್ಯಂತ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕುಗಳಾಗಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News