ಮಣಿಪಾಲ: ಮಾ.6ರಿಂದ ಎಂಐಸಿಯಲ್ಲಿ ‘ನಮ್ಮ ಅಂಗಡಿ’

Update: 2020-03-04 16:40 GMT

ಮಣಿಪಾಲ, ಮಾ.4: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ಪ್ರತಿ ವರ್ಷ ಆಯೋಜಿಸುತ್ತಿರುವ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ‘ನಮ್ಮ ಅಂಗಡಿ’ಯ 17ನೇ ಆವೃತ್ತಿ ಇದೇ ಮಾ.6ರಿಂದ 8ರವರೆಗೆ ಎಂಐಸಿಯ ಆವರಣದಲ್ಲಿ ನಡೆಯಲಿದೆ.

ಕುಂದಾಪುರದ ನಮ್ಮ ಭೂಮಿಯ ಗ್ರಾಮೀಣ ಭಾಗದ ಕರಕುಶಲಕರ್ಮಿಗಳು ತಯಾರಿಸಿದ ವಿವಿಧ ವಸ್ತುಗಳು, ಕಲಾಕೃತಿಗಳು, ಕರಕುಶಲ ವಸ್ತುಗಳು, ಪೀಠೋಪಕರಣಗಳು, ವಿವಿಧ ಉತ್ಪನ್ನಗಳು, ಬಟ್ಟೆ ಹಾಗೂ ಇತರ ಪರಿಕರಗಳು ಇಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕೆ ಲಭ್ಯವಿರುತ್ತವೆ.

ನಮ್ಮ ಅಂಗಡಿ ವಾರ್ಷಿಕ ಪ್ರದರ್ಶನವು ಕುಂದಾಪುರ ಕನ್ಯಾನದ ಸಿಡಬ್ಲುಸಿ ಹಾಗೂ ಎಂಐಸಿಯ ಜಂಟಿ ಸಹಯೋಗದಲ್ಲಿ ಕಳೆದ 16 ವರ್ಷಗಳಿಂದ ನಡೆಯುತಿದ್ದು, ಇಲ್ಲಿನ ಮಾರಾಟದಿಂದ ಬರುವ ಆದಾಯವನ್ನು ನಮ್ಮ ಭೂಮಿಯ ಕುಶಲಕರ್ಮಿಗಳ ುಕ್ಕಳ ಶಿಕ್ಷಣಕ್ಕೆ ನೀಡಲಾಗುತ್ತದೆ.

ನಮ್ಮ ಅಂಗಡಿಯಲ್ಲಿ ಕೈಯಿಂದ ನೇಯ್ದ ಉಡುಪುಗಳು, ಕರಕುಶಲ ವಸ್ತು ಗಳು, ಕುಂಬಾರಿಕೆ ಸಾಮಗ್ರಿಗಳು, ಆಟಿಕೆಗಳು, ಪರಿಕರಗಳು, ಮನೆ ಅಲಂಕಾರಿಕ ವಸ್ತುಗಳು, ಸಾವಯವ ಉತ್ಪನ್ನಗಳನ್ನು ಒಳಗೊಂಡಂತೆ ವೈವಿಧ್ಯಮಯ ಉತ್ಪನ್ನಗಳ ಶ್ರೇಣಿಯನ್ನು ಪ್ರದರ್ಶಿಸಲಾಗುತ್ತದೆ ಹಾಗೂ ಅವು ಮಾರಾಟಕ್ಕೂ ಲಭ್ಯವಿರುತ್ತವೆ.

ನಮ್ಮ ಅಂಗಡಿಯಲ್ಲಿ ಕೈಯಿಂದ ನೇಯ್ದ ಉಡುಪುಗಳು, ಕರಕುಶಲ ವಸ್ತು ಗಳು, ಕುಂಬಾರಿಕೆ ಸಾಮಗ್ರಿಗಳು, ಆಟಿಕೆಗಳು, ಪರಿಕರಗಳು, ಮನೆ ಅಲಂಕಾರಿಕ ವಸ್ತುಗಳು, ಸಾವಯವ ಉತ್ಪನ್ನಗಳನ್ನು ಒಳಗೊಂಡಂತೆ ವೈವ್ಯಿಮಯಉತ್ಪನ್ನಗಳಶ್ರೇಣಿಯನ್ನುಪ್ರದರ್ಶಿಸಲಾಗುತ್ತದೆಹಾಗೂಅವುಮಾರಾಟಕ್ಕೂಲ್ಯವಿರುತ್ತವೆ. ಪ್ರದರ್ಶನದ ಮೂರು ದಿನಗಳ ಕಾಲವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಆಯೋಜಿಸಲಾಗುತ್ತದೆ. ಕುಂದಾಪುರದ ಶ್ರೀಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯ ನೇತೃತ್ವದಲ್ಲಿ ಯಕ್ಷಗಾನ ಕೈಗೊಂಬೆ ಆಟದ ಪ್ರದರ್ಶನ ಕೊನೆಯ ದಿನವಾದ ಮಾ.8ರ ಸಂಜೆ ಆರು ಗಂಟೆಗೆ ನಡೆಯಲಿದೆ. ಯಕ್ಷಗಾನ ಗೊಂಬೆಯಾಟ ಎಂಬುದು ಉಡುಪಿಯಲ್ಲಿ ಹುಟ್ಟಿ, ಬೆಳೆದು ಜನಪ್ರಿಯತೆಯನ್ನು ಪಡೆದಿರುವ ಸುಮಾರು 350 ವರ್ಷಗಳ ಹಳೆಯದಾದ ಒಂದು ಯಕ್ಷಗಾನ ಕಲಾ ಪ್ರಕಾರವಾಗಿದೆ. ಅಲ್ಲದೇ ಈ ವರ್ಷ ಮಕ್ಕಳಿಗಾಗಿ ವಿಶೇಷ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News