ಬೋಳಾರ: ವಿಸ್‌ಡಮ್ ಕಿಡ್ಸ್ ಸ್ಕೂಲ್‌ನ ವಾರ್ಷಿಕೋತ್ಸವ
ಮಂಗಳೂರು, ಮಾ.4: ಬೋಳಾರ್ ಇಸ್ಲಾಮಿಕ್ ಸೆಂಟರ್‌ನ ಅಧೀನದಲ್ಲಿ ನಡೆಸಲ್ಪಡುವ ವಿಸ್‌ಡಮ್ ಕಿಡ್ಸ್ ಶಾಲೆಯ ಎರಡನೆ ವಾರ್ಷಿಕೋತ್ಸವವು ಇತ್ತೀಚೆಗೆ ಜರುಗಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬೋಳಾರ್ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಜಮೀರ್ ಅಂಬರ್ ಪುಟಾಣಿ ಮಕ್ಕಳ ಕಲಿಕಾ ಕೇಂದ್ರಗಳು ಅವರ ಪಾಲಿಗೆ ವಿಸ್ಮಯ ಲೋಕಗಳಾಗುವಂತೆ ನೋಡಿಕೊಳ್ಳಬೇಕು ಎಂದರು.
ಈ ಸಂದರ್ಭ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸೈಯದ್ ಝಾಹಿದ್ ಹುಸೈನ್, ಪ್ರಸೂತಿ ತಜ್ಞೆ ಡಾ. ರೋಶನ್ ಆರಾ ಅತಿಥಿಗಳಾಗಿದ್ದರು.
ಟ್ರಸ್ಟಿ ಕೆಎಂ ಅಶ್ರಫ್ ಸಂಸ್ಥೆಯ ಧ್ಯೇಯೋದ್ದೇಶದ ಬಗ್ಗೆ ವಿವರಿಸಿದರು. ಉಪಾಧ್ಯಕ್ಷ ಎಸ್‌ಎ ಖಲೀಲ್, ಕಾರ್ಯದರ್ಶಿ ಅಬ್ದುಲ್ ಜಲೀಲ್, ಸಹ ಕಾರ್ಯದರ್ಶಿ ಎಂಐ ಖಲೀಲ್ ಇಂಜಿನಿಯರ್, ಖಜಾಂಚಿ ಶೌಕತ್ ಹುಸೈನ್ ಉಪಸ್ಥಿತರಿದ್ದರು.
ಶಾಲೆಯ ಮುಖ್ಯಸ್ಥೆ ಆಯಿಶಾ ಸುಹಾನಾ ಸ್ವಾಗತಿಸಿ, ವಂದಿಸಿದರು. ಆಸಿಲಾ ನಾಸಿರ್ ಸಹಕರಿಸಿದರು....