×
Ad

ಆಳ್ವಾಸ್ ಕಾಲೇಜ್ ಮತ್ತು ವಿ ಅಂಡ್ ಜಿ ಇಂಡಸ್ಟ್ರೀಸ್ ಟೆಸ್ಟಿಂಗ್ ಲ್ಯಾಬೊರೋಟರಿಸ್ ನಡುವೆ ಒಡಂಬಡಿಕೆಗೆ ಸಹಿ

Update: 2020-03-04 23:46 IST

ಮೂಡುಬಿದಿರೆ:  ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಹಾಗೂ ಮಂಗಳೂರಿನ ವಿ ಅಂಡ್ ಜಿ ಇಂಡಸ್ಟ್ರೀಸ್  ಟೆಸ್ಟಿಂಗ್ ಲ್ಯಾಬೊರೋಟರಿಸ್ ಪ್ರೈ.ಲಿನ  ನಡುವೆ ಒಡಂಬಡಿಕೆಗೆ  ಸಹಿ ಹಾಕಲಾಯಿತು.    ಕಾಲೇಜಿನ  ಪ್ರಾಂಶುಪಾಲ  ಡಾ ಪೀಟರ್ ಫೆರ್ನಾಂಡೀಸ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಗಿರೀಶ್ ಬಾಬು ಒಡಂಬಡಿಕೆಗೆ ಸಹಿ ಹಾಕಿದರು. 

ಈ ಒಡಂಬಡಿಕೆಯ ಪ್ರಕಾರ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಟ್ರೈನಿಂಗ್ ಮತ್ತು ಸರ್ಟಿಫಿಕೇಶನ್ ಕೋರ್ಸುಗಳನ್ನು ಕಾಲೇಜಿನಲ್ಲಿ  ಆರಂಭಿಸಿಲಾಗುತ್ತದೆ. ಜತೆಗೆ ಎನ್.ಡಿ.ಟಿ ತಂತ್ರಜ್ಞಾನದ ಟ್ರೈನಿಂಗ್ ಮತ್ತು ಸರ್ಟಿಫಿಕೇಶನ್ ಕೋರ್ಸು ಆರಂಭಿಸಲಾಗುತ್ತದೆ.  ಸಂಶೋಧನಾ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಹೆಚ್ಚಿನ ಮನ್ನಣೆಯನ್ನು ನೀಡಲಾಗುವುದು.

ಈ  ಸಂದರ್ಭದಲ್ಲಿ  ಕಾಲೇಜಿನ  ಡೀನ್ ಡಾ. ಪ್ರವೀಣ್ ಜೆ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಸತ್ಯನಾರಾಯಣ್, ಪ್ರಾಧ್ಯಪಕ ಕೆ.ವಿ ಸುರೇಶ್ ಮತ್ತು ವಿ ಅಂಡ್ ಜಿ ಯ ವೆಂಕಟ ಸುಬ್ರಮಣಿಯನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News