×
Ad

ಅಂಬ್ಲಮೊಗರು: ನುಸ್ರತುಲ್ ಇಸ್ಲಾಂ ಸಮಿತಿಯಯ ಪದಾಧಿಕಾರಿಗಳ ಆಯ್ಕೆ

Update: 2020-03-04 23:51 IST

ಉಳ್ಳಾಲ:  800 ವರ್ಷಗಳ ಇತಿಹಾಸ ಹೊಂದಿರುವ  ಅಂಬ್ಲಮೊಗರು  ಗ್ರಾಮದ ಕುಂಡೂರು ಜುಮಾ ಮಸೀದಿಯ ಅಧೀನದಲ್ಲಿರುವ  ನುಸ್ರತುಲ್ ಇಸ್ಲಾಂ ಸಮಿತಿಯ 42ನೇ  ವಾರ್ಷಿಕ ಮಹಾ ಸಭೆಯು ಕುಂಡೂರು ಮಸೀದಿ ಅಧ್ಯಕ್ಷ ಹಾಜಿ ಅಬೂಬಕ್ಕರ್ ಸಿದ್ಧೀಕ್ ಸ್ವಾಗತ್ ರವರ ಸಭಾಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ಕುಂಡೂರು ಕೇಂದ್ರ ಜುಮಾಮಸೀದಿಯ ಖತೀಬ್  ಎಸ್.ಬಿ ಮೊಹಮ್ಮದ್ ಶರೀಫ್ ಅರ್ಶದಿ ರವರು ಉದ್ಘಾಟಿಸಿದರು. ಬಳಿಕ 2020-21 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಅಧ್ಯಕ್ಷರಾಗಿ ಎಸ್.ಎಂ ಮೊಹಮ್ಮದ್ ರಫೀಕ್, ಉಪಾಧ್ಯಕ್ಷರಾಗಿ ಅಬೂಸಾಲಿ ಎಸ್.ಬಿ, ಪ್ರಧಾನ ಕಾರ್ಯದರ್ಶಿಯಾಗಿ ಸಲೀಮ್ ಅಲಿ, ಕಾರ್ಯದರ್ಶಿಯಾಗಿ ನವಾಝ್ ಎಂ.ಪಿ, ಕೋಶಾಧಿಕಾರಿಯಾಗಿ ಹಕೀಮ್ ಎಸ್.ಬಿ, ಲೆಕ್ಕ ಪರಿಶೋಧಕರಾಗಿ ಅಬೂಬಕ್ಕರ್ ಸಿದ್ಧೀಕ್ ಯಸ್‍ರಾಝ್ ,  ಸಂಘಟನಾ ಕಾರ್ಯದರ್ಶಿಯಾಗಿ ಮೊಹಮ್ಮದ್ ಇಕ್ಬಾಲ್ ಎಸ್.ಎಂ ಹಾಗೂ ಇತರ 14 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News