ನಾಯಿಯ ಚಿತ್ರವಿರುವ ಮತದಾರರ ಗುರುತು ಚೀಟಿ ಸ್ವೀಕರಿಸಿದ ಬಂಗಾಳದ ವ್ಯಕ್ತಿ!

Update: 2020-03-05 05:01 GMT

ಮುರ್ಷಿದಾಬಾದ್, ಮಾ.5: ಅತ್ಯಂತ ಆಘಾತಕಾರಿ ಘಟನೆಯೊಂದರಲ್ಲಿ ಪಶ್ಚಿಮಬಂಗಾಳದ ಮುರ್ಶಿದಾಬಾದ್‌ನ ರಾಮನಗರ ಜಿಲ್ಲೆಯ ನಿವಾಸಿಯೊಬ್ಬರಿಗೆ ನಾಯಿಯ ಚಿತ್ರವಿರುವ ಮತದಾರ ಗುರುತಿನ ಚೀಟಿ ನೀಡಲಾಗಿದೆ.

‘‘ನನ್ನ ವೋಟರ್ ಐಡಿ ಕಾರ್ಡ್ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದ್ದೆ. ನಾನು ತಿದ್ದುಪಡಿಗೊಂಡ ಕಾರ್ಡ್ ನ್ನು ಸ್ವೀಕರಿಸಿದ್ದೆ. ಅದರಲ್ಲಿ ನನ್ನ ಫೋಟೊದ ಬದಲಿಗೆ ನಾಯಿಯ ಫೋಟೊ ಇತ್ತು’’ ಎಂದು ಸುನೀಲ್ ಕರ್ಮಾಕರ್ ಹೇಳಿದ್ದಾರೆ.

‘‘ನಿನ್ನೆ ದುಲಾಲ್ ಸ್ಮತಿ ಶಾಲೆಗೆ ಬರುವಂತೆ ನನಗೆ ತಿಳಿಸಲಾಗಿತ್ತು. ಅಲ್ಲಿಗೆ ಹೋದಾಗ ಈ ವೋಟರ್ ಕಾರ್ಡ್ ನೀಡಲಾಗಿತ್ತು. ಫೋಟೊ ನೋಡಿದಾಗ ಶಾಕ್ ಆಯಿತು. ಸಹಿ ಹಾಕಿ ವೋಟರ್ ಐಡಿ ನೀಡಿದ್ದ ಅಧಿಕಾರಿ ನನ್ನ ಫೋಟೊ ನೋಡಲಿಲ್ಲ. ನಾನು ಬಿಡಿಒ ಕಚೇರಿಗೆ ತೆರಳಿ, ಇಂತಹ ಘಟನೆ ಮತ್ತೆ ಆಗದಂತೆ ನೋಡಿಕೊಳ್ಳಿ ಎಂದು ವಿನಂತಿಸುತ್ತೇನೆೆ’’ ಎಂದು ಕರ್ಮಾಕರ್ ಹೇಳಿದ್ದಾರೆ.

ವೋಟರ್ ಐಡಿ ಚಿತ್ರವನ್ನು ಈಗಾಗಲೇ ಸರಿಪಡಿಸಲಾಗಿದೆ. ತಿದ್ದುಪಡಿಗೊಂಡ ಕಾರ್ಡ್‌ನ್ನು ಕರ್ಮಾಕರ್ ಸ್ವೀಕರಿಸಲಿದ್ದಾರೆ. ಇದೊಂದು ಅಂತಿಮ ಐಡಿ ಕಾರ್ಡ್ ಅಲ್ಲ. ತಪ್ಪುಗಳಿದ್ದರೆ ಅದನ್ನು ಸರಿಪಡಿಸಿಕೊಳ್ಳಲಾಗುವುದು. ನಾಯಿಯ ಫೋಟೊ ಬಗ್ಗೆ ಹೇಳುವುದಾದರೆ, ಆನ್‌ಲೈನ್‌ನಲ್ಲಿ ಅರ್ಜಿ ತುಂಬುವಾಗ ಯಾರೋ ಒಬ್ಬರು ಇಂತಹ ಕೆಲಸ ಮಾಡಿರಬಹುದು. ಕರ್ಮಾಕರ್ ಅವರು ಸರಿಪಡಿಸಲ್ಪಟ್ಟ ಅಂತಿಮ ಐಡಿ ಕಾರ್ಡ್ ಪಡೆಯಲಿದ್ದಾರೆ ಎಂದು ಬ್ಲಾಕ್ ಡೆವಲಪ್‌ಮೆಂಟ್ ಆಫೀಸರ್(ಬಿಡಿಒ)ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News