×
Ad

ಕಬಕ: ಮಾ.06 ರಂದು ಮತ ಪ್ರಭಾಷಣ, ಸನ್ಮಾನ ಹಾಗೂ ದಫ್ ಸ್ಪರ್ಧಾ ಕಾರ್ಯಕ್ರಮ

Update: 2020-03-05 10:40 IST

ಪುತ್ತೂರು: ಅಲ್-ಇಸ್ಲಾಹ್ ಸಾಹಿತ್ಯ ಸಮಾಜ (ರಿ.) ವಿದ್ಯಾಪುರ ಕಬಕ ಇದರ 20ನೇ ವಾರ್ಷಿಕೋತ್ಸವದ ಪ್ರಯುಕ್ತ ಏಕದಿನ ಮತ ಪ್ರಭಾಷಣ, ಆಹ್ವಾನಿತ ತಂಡಗಳ ದಫ್ ಸ್ಪರ್ಧೆ ಹಾಗೂ ಸನ್ಮಾನ ಕಾರ್ಯಕ್ರಮವು ಮಾರ್ಚ್ 6, ಶುಕ್ರವಾರ ಮಗ್ರಿಬ್ ನಮಾಝ್ ನಂತರ ಮರ್ಹೂಂ ಎಂ ಎ ಖಾಸಿಂ ಉಸ್ತಾದ್ ವೇದಿಕೆ, ಕಬಕ ಜಂಕ್ಷನ್ ಬಗ್ಗುಮೂಲೆ ಮೈದಾನದಲ್ಲಿ ನಡೆಯಲಿದೆ.

ಅಲ್-ಇಸ್ಲಾಹ್ ಸಾಹಿತ್ಯ ಸಮಾಜ (ರಿ.) ವಿದ್ಯಾಪುರ ಕಬಕ  ಇದರ ಗೌರವಾಧ್ಯಕ್ಷರಾದ ಸಯ್ಯಿದ್ ಅಲ್-ಹಾದೀ ಯಹ್ಯಾ ತಂಙಳ್ ಸಾಲ್ಮರ ಅಧ್ಯಕ್ಷತೆ ವಹಿಸಲಿದ್ದಾರೆ. MJM ಕಬಕ ಮುದರ್ರಿಸ್ ಹಾಜಿ B.N.ಮುಹಮ್ಮದ್ ಮುಸ್ಲಿಯಾರ್ ದುವಾಶೀರ್ವಚನ ಮಾಡಲಿದ್ದಾರೆ.

ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಕಾರ್ಯದರ್ಶಿ ಶೈಖುನಾ M.T.ಉಸ್ತಾದ್ ಉದ್ಘಾಟನೆ ಹಾಗೂ 

PM ಉಮರ್ ದಾರಿಮಿ ಸಾಲ್ಮರ  ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.

ಖ್ಯಾತಿಯ ವಾಗ್ಮಿ ಇಬ್ರಾಹಿಮ್ ಖಲೀಲ್ ಹುದವಿ ಕಾಸರಗೋಡು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಹಾಗೂ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಗುವುದು ಮತ್ತು ಆಹ್ವಾನಿತ ತಂಡಗಳ ಆಕರ್ಷಣೀಯ ದಫ್ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News