×
Ad

ಮಹಿಳಾ ವಿಶ್ವಕಪ್: ಆಸ್ಟ್ರೇಲಿಯ ಫೈನಲ್‌ಗೆ, ಭಾರತ ಎದುರಾಳಿ

Update: 2020-03-05 17:25 IST

ಸಿಡ್ನಿ, ಮಾ.5: ಐಸಿಸಿ ವನಿತೆಯರ ವಿಶ್ವಕಪ್ ಟೂರ್ನಿಯ ಮಳೆಬಾಧಿತ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯ ತಂಡ ದಕ್ಷಿಣ ಆಫ್ರಿಕಾವನ್ನು ಡಿಎಲ್ ಪದ್ದತಿಯ ಪ್ರಕಾರ 5 ರನ್‌ನಿಂದ ರೋಚಕವಾಗಿ ಮಣಿಸಿತು.

ಮಾ.8ರಂದು ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಆಸ್ಟ್ರೇಲಿಯ ತಂಡ ಭಾರತದ ಸವಾಲ ಎದುರಿಸಲಿದೆ.

ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 134 ರನ್‌ಗಳಿಸಿತು. ನಾಯಕಿ ಲ್ಯಾನಿಂಗ್ ಔಟಾಗದೆ 49ರನ್ ಗಳಿಸಿದರು.

ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ದಕ್ಷಿಣ ಆಫ್ರಿಕಾ ತಂಡಕ್ಕೆ 13 ಓವರ್‌ಗಳಲ್ಲಿ 98ರನ್ ಪರಿಷ್ಕೃತ ಗುರಿ ನೀಡಲಾಯಿತು. ದ.ಆಫ್ರಿಕಾ 13 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿ ಸೋಲೊಪ್ಪಿಕೊಂಡಿತು. ವೊಲ್ವಾರ್ಟ್ ಔಟಾಗದೆ 41 ರನ್ ಗಳಿಸಿದರು. ಶುಟ್ 17 ರನ್‌ಗೆ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News